ಶನಿವಾರಸಂತೆ, ಮೇ 25: ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಇಂದು ಬೆಳಿಗ್ಗೆ ರಸ್ತೆ ದಾಟುತ್ತಿದ್ದ ಮಹಿಳೆಗೆ ಮಾರುಕಟ್ಟೆ ಕಡೆಯಿಂದ ಮಾರುತಿ ಕಾರು (ಕೆಎ-02 ಎಂಎ-4186) ಚಾಲಕ ವೇಗವಾಗಿ ಬಂದು ಡಿಕ್ಕಿಪಡಿಸಿದ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಶನಿವಾರಸಂತೆ ಹಾವುಗೊಲ್ಲರ ಕಾಲೋನಿಯ ಸಂತೋಷ್, ತಾಯಿ ಅಕ್ಕಮ್ಮ ಗಾಯಗೊಂಡಿದ್ದಾರೆ. ಸೋಮವಾರಪೇಟೆ ಕಾನ್ವೆಂಟ್ ಬಾಣೆಯ ಆರೋಪಿ ಬಿ. ರಫೀಕ್ ಎಂಬಾತನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಮಹಿಳೆಗೆ ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಹಾಸನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಗ ನೀಡಿದ ದೂರಿನ ಮೇರೆಗೆ ಆರೋಪಿ ಚಾಲಕ ಹಾಗೂ ಕಾರನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.