ಮಡಿಕೇರಿ, ಮೇ 26: ಪ್ರ¸ಕ್ತ (2019-20) ಸಾಲಿಗೆ ಸೋಮವಾರಪೇಟೆ ತಾಲೂಕಿನ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆ, ನೆಲ್ಯಹುದಿಕೇರಿ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿ(ಎಲ್‍ಕೆಜಿ ಮತ್ತು 1 ನೇ ತರಗತಿ ಆಂಗ್ಲ ಮಾಧ್ಯಮ ಶಾಲೆ) ಪ್ರಾರಂಭಿಸಲಾಗಿದೆ ಎಂದು ನೆಲ್ಯಹುದಿಕೇರಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.
ಶಾಲೆಯ ವಿಶೇಷ ಆಕರ್ಷಣೆಗಳು, ನುರಿತ, ಅನುಭವಿ ಹಾಗೂ ವಿಶೇಷ ತರಬೇತಿ ಪಡೆದ ಶಿಕ್ಷಕರು, ಸುಸಜ್ಜಿತವಾದ ಶಾಲಾ ಕಟ್ಟಡ, ಮಕ್ಕಳ ಕಲಿಕಾ ಸ್ನೇಹಿ ವಾತಾವರಣ, ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಶೂ ಸಾಕ್ಸ್, ವಿದ್ಯಾರ್ಥಿ ವೇತನ ಸೌಲಭ್ಯ, ಪೌಷ್ಟಿಕ ಹಾಲು, ಮಧ್ಯಾಹ್ನ ಬಿಸಿಯೂಟ ಮತ್ತು ಸ್ಮಾರ್ಟ್ ಕ್ಲಾಸ್‍ಗಳು.
ಪೂರ್ವ ಪ್ರಾಥಮಿಕ ತರಗತಿಗೆ ಅತಿಥಿ ಶಿಕ್ಷಕ ಮತ್ತು ಶಿಕ್ಷಕಿ ಬೇಕಾಗಿದ್ದಾರೆ: ಪದವಿ ಪೂರ್ವ ಶಿಕ್ಷಣದಲ್ಲಿ ಕನಿಷ್ಟ ಶೇ.50 ಅಂಕ ಪಡೆದು ತೇರ್ಗಡೆಯಾಗಿರಬೇಕು. ಎನ್‍ಸಿಟಿಇ ಮಾನ್ಯತೆ ಪಡೆದ ಸಂಸ್ಥೆಯಿಂದ ಎರಡು ಅಥವಾ ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಯ ಡಿಪ್ಲೋಮಾ ಇನ್ ನರ್ಸರಿ ಟೀಚರ್ ಎಜುಕೇಶನ್, ಪ್ರೀ ಸ್ಕೂಲ್ ಎಜುಕೇಶನ್, ಅರ್ಲಿ ಚೈಲ್ಡ್‍ಹುಡ್ ಎಜುಕೇಶನ್ ಪ್ರೊಗ್ರಾಂ(ಡಿ.ಸಿ.ಇಡಿ) ಅಥವಾ ಬಿ.ಇಡ್(ನರ್ಸರಿ), 45 ವರ್ಷಕ್ಕಿಂತ ಕಡಿಮೆ ಇರಬೇಕು.
ಪೂರ್ವ ಪ್ರಾಥಮಿಕ ತರಗತಿಗೆ ಆಯಾ ಬೇಕಾಗಿದ್ದಾರೆ: ಕನಿಷ್ಟ ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿರಬೇಕು. ಮಹಿಳೆಯರಿಗೆ ಆದ್ಯತೆ, 45 ವರ್ಷಕ್ಕಿಂತ ಕಡಿಮೆ ಇರಬೇಕು. ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗುವದು ಎಂದು ಸೋಮವಾರಪೇಟೆ ತಾಲೂಕು ನೆಲ್ಯಹುದಿಕೇರಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.