ಆಧಾರ್ ಕಾರ್ಡ್ ಕಳೆದುಕೊಂಡರೆ ಅಥವಾ ಹಾನಿಗೊಳಗಾದರೆ ಹೊಸ ಆಧಾರ್ ಕಾರ್ಡ್ ಪಡೆಯಲು ಸಾಧ್ಯವೆ ಎಂಬದು ಹಲವರ ಪ್ರಶ್ನೆ. ಒಬ್ಬ ವ್ಯಕ್ತಿಯು ಆಧಾರ್ ಕಾರ್ಡ್ ದಾಖಲಾತಿ ಸಮಯದಲ್ಲಿ ನೀಡಲಾದ ಅಂಗೀಕಾರ ಸ್ಲಿಪ್‍ನಲ್ಲಿ ನಮೂದಿಸಲಾದ ನೋಂದಣಿ ಸಂಖ್ಯೆಯನ್ನು ಒದಗಿಸುವ ಮೂಲಕ ಯುಐಡಿಎಐನ ಅಧಿಕೃತ ವೆಬ್‍ಸೈಟ್ ಮೂಲಕ ನಕಲಿ ಆಧಾರ್ ಕಾರ್ಡ್ ಪಡೆಯಲು ಅವಕಾಶವಿದೆ. ನಕಲಿ ಆಧಾರ್ ಕಾರ್ಡ್ ಹಳೆಯ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಮೂಲ ಕಾರ್ಡ್‍ನಲ್ಲಿರುವ ಇತರ ವಿವರಗಳನ್ನು ಒಳಗೊಂಡಿರುತ್ತದೆ.

ಒಂದುವೇಳೆ ಆಧಾರ್ ಕಾರ್ಡ್ ಕಳೆದುಕೊಂಡರೂ ಆಧಾರ್ ಸಂಖ್ಯೆ ಅಥವಾ ಸ್ವೀಕೃತಿ ನಂಬರ್ ಮರೆಯಬೇಡಿ. ಅಂದರೆ ಆಧಾರ್ ಕಾರ್ಡ್ ನಂಬರ್ ಹಾಗೂ ನೋಂದಣಿ ನಂತರ ಸಿಗುವ ಸ್ವೀಕೃತಿ ಸಂಖ್ಯೆ ನೆನಪಿನಲ್ಲಿಟ್ಟುಕೊಳ್ಳಿ. ಇವೆರಡು ಇದ್ದರೆ ಬದಲೀ ಆಧಾರ್ ಕಾರ್ಡ್‍ನ್ನು ಆನ್‍ಲೈನ್ ಮೂಲಕ ಪಡೆಯುವದು ಸುಲಭ.