ನೀವು ಆಧಾರ್ ಕಳೆದುಕೊಂಡರೆ ಆನ್‍ಲೈನ್ ಮೂಲಕ ನಕಲಿ ಕಾರ್ಡ್ ಪ್ರಿಂಟ್ ಮಾಡಬಹುದು. ಇದಕ್ಕಾಗಿ ನಾಮಿನಲ್ ಮೊತ್ತ ರೂ. 50 ಪಾವತಿಸಬೇಕಾಗುತ್ತದೆ. ಜೊತೆಗೆ ನಿಮ್ಮ ಗಿiಡಿಣuಚಿಟ Iಜeಟಿಣiಜಿiಛಿಚಿಣioಟಿ ಟಿumbeಡಿ ಗೊತ್ತಿರಬೇಕು. ಮೊಬೈಲ್ ನಂಬರ್ ಆಧಾರ್‍ನೊಂದಿಗೆ ಲಿಂಕ್ ಆಗಿದ್ದರೆ ನಿಮ್ಮ ಮೊಬೈಲ್‍ಗೆ ಒಟಿಪಿ ಬರುತ್ತದೆ.

ಇ-ಆಧಾರ್ ಕಾರ್ಡ್ ಪಡೆಯುವದು ಹೇಗೆ?

ಯುಐಡಿಎಐ ವೆಬ್‍ಸೈಟ್ hಣಣಠಿs://uiಜಚಿi.gov.iಟಿ/ ಗೆ ಭೇಟಿ ನೀಡಿ. ನಿಮ್ಮ ನೋಂದಣಿ ಸಂಖ್ಯೆ ವಿವರ ನಮೂದಿಸಿ (ನೋಂದಣಿ ಸಂಖ್ಯೆ, ದಿನಾಂಕ, ಸಮಯ, ಹೆಸರು, ಪಿನ್‍ಕೋಡ್) ಆಧಾರ್ ಸ್ವೀಕೃತಿ ಪಾವತಿಯಲ್ಲಿ ಇರುವಂತೆ. ಅಥವಾ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ. ಮೇಲ್ಬಾಗದಲ್ಲಿರುವ I ಊಂಗಿಇ ಅಡಿಯಲ್ಲಿರುವ ಆಧಾರ್ ಆಯ್ಕೆ ಸೂಚಿಸಿ. ನೋಂದಾಯಿತ ಮೊಬೈಲ್ ಸಂಖ್ಯೆಗೆ ಔಖಿP ಬರುತ್ತದೆ. ಅದನ್ನು ನಮೂದಿಸಿ ಮುಂದುವರೆಯಿರಿ.

ನಿಮ್ಮ ಮೊಬೈಲ್ ನಂಬರ್‍ಗೆ ಆಧಾರ್ ಅಥವಾ ದಾಖಲಾತಿ ಐಡಿ ಬಂದ ನಂತರ hಣಣಠಿs://eಚಿಚಿಜhಚಿಚಿಡಿ.uiಜಚಿi.gov.iಟಿ/ ಗೆ ಭೇಟಿ ನೀಡಿ. ಅಲ್ಲಿ ನೀವು ಆಧಾರ್ ನಂಬರ್ ಅಥವಾ ದಾಖಲಾತಿ ಸಂಖ್ಯೆ ನಮೂದಿಸಬೇಕು. ಆಧಾರ್ ನಂಬರ್ ನಮೂದಿಸಿ, ವಿಳಾಸ, ಪಿನ್‍ಕೋಡ್, ಸೆಕ್ಯುರಿಟಿ ಕೋಡ್ ಮತ್ತು ಮೊಬೈಲ್ ನಂಬರ್ ನಮೂದಿಸಿ. ನಿಮ್ಮ ಮೊಬೈಲ್ ನಂಬರ್‍ಗೆ ಬರುವ ಔಖಿP ನಮೂದಿಸಿ, ಗಿಚಿಟiಜಚಿಣe ಚಿಟಿಜ ಉeಟಿeಡಿಚಿಣ ಮೇಲೆ ಕ್ಲಿಕ್ ಮಾಡಿ. ಆನ್‍ಲೈನ್‍ನಲ್ಲಿ ನಕಲಿ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು. ಆಧಾರ್ ಪಿಡಿಎಫ್ ಫೈಲ್ ಜನರೇಟ್ ಮಾಡಬಹುದು.

ಆಫ್ಲೈನ್ ಮೂಲಕ ನಕಲಿ ಇ-ಆಧಾರ್ ಕಾರ್ಡ್ ಪಡೆಯುವದು ಹೇಗೆ?

ಆಧಾರ್ ದಾಖಲಾತಿ ಕೇಂದ್ರ (ಂಚಿಜhಚಿಚಿಡಿ ಇಟಿಡಿoಟmeಟಿಣ ಅeಟಿಣಡಿe) ಭೇಟಿ ನೀಡುವ ಮೂಲಕ ಅಥವಾ ಟೋಲ್-ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ ಆಧಾರ್ ನಕಲು ಪ್ರತಿಯನ್ನು ಪಡೆಯಬಹುದು. ಬಳಕೆದಾರರು ಯುಐಡಿಎಐನ ಟೋಲ್-ಫ್ರೀ 1947 ಸಂಖ್ಯೆಗೆ ಕರೆ ಮಾಡಿ, ನಕಲಿ ಆಧಾರ್‍ಗಾಗಿ ವಿನಂತಿಸಬಹುದು.

ಈ ಮುಂದಿನ ಹಂತಗಳನ್ನು ಅನುಸರಿಸಬೇಕು

ಯುಐಡಿಎಐನ ಟೋಲ್ ಫ್ರೀ ಸಂಖ್ಯೆ 1800-180-1947 ಅಥವಾ 1947ಕ್ಕೆ ಕರೆ ಮಾಡಿ. ಐವಿಆರ್ ಆಯ್ಕೆಗಳನ್ನು ಅನುಸರಿಸಿ ಮತ್ತು ಆಧಾರ್ ಕಾರ್ಯನಿರ್ವಾಹಕರೊಂದಿಗೆ ಮಾತನಾಡಿ. ನಿಮ್ಮ ಆಧಾರ್ ಕಾರ್ಡ್ ನಕಲು ಪ್ರತಿಗಾಗಿ ಕಾರ್ಯನಿರ್ವಾಹಕರೊಂದಿಗೆ ಚರ್ಚೆ ಮಾಡಿ. ಕಾರ್ಯನಿರ್ವಾಹಕರು ನಿಮ್ಮ ಗುರುತನ್ನು ಪರಿಶೀಲಿಸಲು ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ.

ಪರಿಶೀಲಿಸಿದ ನಂತರ, ಕಾರ್ಯನಿರ್ವಾಹಕನು ನಿಮ್ಮ ವಿನಂತಿಯನ್ನು ಒಪ್ಪಿಕೊಂಡು ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾನೆ. ನಕಲಿ ಆಧಾರ್ ಕಾರ್ಡ್ ಅನ್ನು ನಿಮ್ಮ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಲಾಗುವದು.

(ಸಂಗ್ರಹ) - ಯಜಾಸ್ ದುದ್ದಿಯಂಡ, ವೀರಾಜಪೇಟೆ