ಸುಂಟಿಕೊಪ್ಪ, ಮೇ 25: ಬ್ಲೂ ಬಾಯ್ಸ್ ಯುವಕ ಸಂಘದ ವತಿಯಿಂದ ನಡೆಯುತ್ತಿರುವ ಡಿ.ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಟೂರ್ನಿಯ ಶನಿವಾರ ನಡೆದ ಪಂದ್ಯಾವಳಿಯಲ್ಲಿ ಇರಿಟಿ ಹಾಗೂ ನೇತಾಜಿ ಕೊಡಗರಹಳ್ಳಿ ಹಾಗೂ ಕೊಡಗು ಎಫ್.ಸಿ. ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಿವೆ.
ದಿನದ ಮೊದಲ ಪಂದ್ಯದಲ್ಲಿ ಇಕೆಎನ್ ಎಫ್.ಸಿ. ಇರಿಟಿ ತಂಡವು ಶೀತಲ್ ಎಫ್.ಸಿ.ಮೈಸೂರು ತಂಡವನ್ನು 2-0 ಗೋಲುಗಳಿಂದ ಸೋಲಿಸಿತು.
ಪ್ರಾರಂಭದಿಂದಲೂ 2 ತಂಡಗಳು ಬಿರುಸಿನ ಆಟಕ್ಕಿಳಿದ್ದು ಪಂದ್ಯದ ಮೊದಲಾರ್ಧದ 2ನೇ ನಿಮಿಷದಲ್ಲಿ ಇರಿಟಿ ತಂಡದ ಮುನ್ನಡೆ ಆಟಗಾರ ಸಿಬಿನ್ ಮೈಸೂರು ತಂಡದ ಗೋಲು ಕೀಪರನ್ನು ವಂಚಿಸಿ ಗೋಲು ಬಾರಿಸುವುದರೊಂದಿಗೆ ಮುನ್ನಡೆ ತಂದುಕೊಟ್ಟರು. ನಂತರ ಮುಂದುವರೆದ ಪಂದ್ಯಾವಳಿಯಲ್ಲಿ ಸಮಬಲದ ಪ್ರದರ್ಶನ ನೀಡುವದರೊಂದಿಗೆ 2 ತಂಡಗಳು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ದ್ವಿತೀಯಾರ್ಧದಲ್ಲಿ ಮತ್ತೇ ಬಿರುಸಿನ ಆಟಕ್ಕೆ ಧುಮುಕಿದ ಇರಿಟಿ ತಂಡಕ್ಕೆ ಮೈಸೂರು ತಂಡದ ಆಟಗಾರ ಮಾಡಿದ ತಪ್ಪಿಗಾಗಿ ಫ್ರಿ ಕಿಕ್ ದೊರೆತು ಅದನ್ನು 16ನೇ ನಿಮಿಷದಲ್ಲಿ ಕಿಶೋರ್ ಗೋಲಾಗಿ ಪರಿವರ್ತಿಸಿದ್ದರಿಂದ ಮೈಸೂರು ತಂಡ ಕೊನೆÀಯ ಹಂತದಲ್ಲಿ ಸೋಲನ್ನು ಅನುಭವಿಸುವದರೊಂದಿಗೆ ಇರಿಟಿ ಎಫ್.ಸಿ. ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.
ಎರಡನೇ ಪಂದ್ಯದಲ್ಲಿ ನೇತಾಜಿ ಯುವಕ ಸಂಘ ಕೊಡಗರಹಳ್ಳಿ ತಂಡವು ಅಶೋಕ ಎಫ್.ಸಿ.ಮಮೈಸೂರು ತಂಡವನ್ನು 1-0 ಗೋಲುಗಳಿಂದ ಜಯಗಳಿಸಿ ಮುಂದಿನ ಹಂತಕ್ಕೆ ತಲಪಿದೆ.
ಮೊದಲಾರ್ಧದಲ್ಲಿ 2 ತಂಡಗಳು ಸಮಬಲ ಹೋರಾಟವನ್ನು ನಡೆಸಿ ಕ್ರೀಡಾಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತು. 2 ತಂಡಗಳ ಆಟದಿಂದ ಯಾವದೇ ಗೋಲು ಬರಲಿಲ್ಲ. ದ್ವಿತೀಯಾರ್ಧದಲ್ಲಿ ಹೊಂದಾಣಿಕೆಯ ಆಟವನ್ನು ತೋರಿದ ಕೊಡಗರಹಳ್ಳಿ ತಂಡ ಉತ್ತಮ ಪಾಸ್ಗಳಿಂದ ನೆರೆದಿದ್ದವರನ್ನು ಆಕರ್ಷಿಸಿತು. ಪಂದ್ಯದ 15ನೇ ನಿಮಿಷದಲ್ಲಿ ಎನ್.ವೈ.ಸಿ ಕೊಡಗರಹಳ್ಳಿ ತಂಡದ ಆಟಗಾರ ಯಾರೀಶ್ ಹೊಡೆದ ಗೋಲು ತಂಡವನ್ನು ಜಯದ ಹೊಸ್ತಿಲಿಗೆ ತಂದು ನಿಲ್ಲಿಸಿತು.
ಮೂರನೇ ಪಂದ್ಯಾವಳಿಯು ಕೊಡಗು ಎಫ್.ಸಿ ಹಾಗೂ ಸಿಟಿಜನ್ ಎಫ್.ಸಿ ಉಪ್ಪಳ ತಂಡಗಳ ನಡುವೆ ನಡೆದು ಕೊಡಗು ಎಫ್.ಸಿ ತಂಡದ ಮುನ್ನಡೆ ಆಟಗಾರ ಸುದೀಪ್ ಮೋದಲಾರ್ಧದ 10 ನೇ ನಿಮಿಷದಲ್ಲಿ ಎದುರಾಳಿ ತಂಡದ ಮೇಲೆ 1 ಗೋಲು ಗಳಿಸುವ ಮೂಲಕ ಮುನ್ನಡೆ ಒದಗಿಸಿದರು ಕೊಡಗು ಎಫ್.ಸಿ. ತಂಡದ ಮತ್ತೋರ್ವ ಆಟಗಾರ ಪಾಂಡ್ಯನ್ 18 ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸುವ ಮೂಲಕ ಎದುರಾಳಿ ತಂಡಕ್ಕೆ ಒತ್ತಡವನ್ನು ಹೇರಿದರು. ದ್ವಿತೀಯಾರ್ಧದಲ್ಲಿ 2 ತಂಡಗಳಿಗೂ ಹಲವು ಅವಕಾಶಗಳು ಇದ್ದರೂ ಎದುರಾಳಿ ತಂಡದ ಮೇಲೆ ಗೋಲುಗಳಿಸಲು ವಿಫಲಗೊಂಡಿತ್ತಾದರೂ ದ್ವಿತೀಯಾರ್ಧ 19ನೇ ನಿಮೀಷದಲ್ಲಿ ಪಾಂಡ್ಯನ್ ಮತ್ತೊಂದು ಗೋಲುಗಳಿಸುವ ಮೂಲಕ 3-0 ಗೊಲುಗಳಿಂದ ಕೊಡಗು ಎಫ್.ಸಿ.ತಂಡವು ಮುಂದಿನ ಸುತ್ತಿಗೆ ಆರ್ಹತೆ ಪಡೆಯಿತು.