ಮಡಿಕೇರಿ, ಮೇ 25: ಹಾಕಿ ಇಂಡಿಯಾ ವತಿಯಿಂದ ಹರಿಯಾಣದ ಹಿಸಾನ್‍ನಲ್ಲಿ ತಾ. 27 ರಿಂದ ಜೂನ್ 7 ರವರೆಗೆ ಏರ್ಪಡಿಸಲಾಗಿರುವ 9ನೇ ಎ ಡಿವಿಜನ್ ಸಬ್ ಜೂನಿಯರ್ ಬಾಲಕಿಯರ ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಹಾಕಿ ಕರ್ನಾಟಕ ತಂಡದಲ್ಲಿ 18 ಮಂದಿ ಆಟಗಾರ್ತಿಯರ ಪೈಕಿ ಕೊಡಗಿನ 11 ಮಂದಿ ಆಟಗಾರ್ತಿಯರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಹಾಸನ ಜಿಲ್ಲೆಯ ಎಸ್.ಎಸ್. ನಿಶು ನಾಯಕತ್ವದ ತಂಡದಲ್ಲಿ ಜಿಲ್ಲೆಯ ಪಿ.ಎನ್. ಅರ್ಪಿತ (ಗೋಲ್ ಕೀಪರ್), ಹೆಚ್.ಪಿ. ಸಿಂಚನ, ಹೆಚ್.ಎ. ಅಪ್ಸರ, ಪಿ.ಜಿ. ದೇಚಮ್ಮ, ಬಿ.ಎಸ್. ಚಂದನ, ಬಿ. ಸುಫಾನ, ಪಿ.ಯು. ರಮ್ಯ, ಕೆ.ಎಸ್. ಅನ್ನಪೂರ್ಣ, ಎಂ.ಎಂ. ಪದ್ಮಿನಿ, ಬಿ.ಡಿ. ಗಾಯನ, ಬಿ.ಡಿ. ಗಗನ ಅವರುಗಳು ಅವಕಾಶ ಪಡೆದಿದ್ದಾರೆ.
ಇವರೊಂದಿಗೆ ಹಾಸನ ಹಾಗೂ ಮೈಸೂರಿನ ಎಂ.ಎಸ್. ಸುಶ್ಮಿತಾ (ಗೋಲ್ ಕೀಪರ್), ಎಸ್.ಕೆ. ಸುಪ್ರಿತಾ, ಡಿ.ಎಂ. ಚೈತ್ರ, ಸಿ.ಎಂ. ಸಹನ, ಜೆ. ಚಂದನ, ಕಾವೇರಿ ಲೆಂಕಣ್ಣನವರ್ ಅವರುಗಳು ಸ್ಥಾನ ಪಡೆದುಕೊಂಡಿದ್ದಾರೆ. ತಂಡದ ತರಬೇತುದಾರರಾಗಿ ಸಂಜಯ್ ಬನಾಡ್ ಕಾರ್ಯನಿರ್ವಹಿಸಲಿದ್ದಾರೆ.
ಕರ್ನಾಟಕ ತಂಡವು ಎ ಪೂಲ್‍ನಲ್ಲಿ ಆಡಲಿದ್ದು, ಹರಿಯಾಣ, ಪಂಜಾಬ್, ಒಡಿಶ್ಸಾ ಹಾಗೂ ಬಿಹಾರ್ ತಂಡಗಳೊಂದಿಗೆ ಸೆಣಸಲಿದೆ ಎಂದು ಹಾಕಿ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಡಾ. ಎ.ಬಿ. ಸುಬ್ಬಯ್ಯ ತಿಳಿಸಿದ್ದಾರೆ.