ಶನಿವಾರಸಂತೆ, ಮೇ 25: ಗೋಪಾಲಪುರ ಗ್ರಾಮದ ಸಂತ ಅಂತೋಣಿ ಚರ್ಚ್‍ನಲ್ಲಿ ವಾರ್ಷಿಕ ಹಬ್ಬದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಆರಂಭವಾದವು.
ಚರ್ಚ್‍ನ ಫಾದರ್ ಡೇವಿಡ್ ಸಗಾಯ್ ರಾಜ್ ನೇತೃತ್ವದಲ್ಲಿ ಗ್ರಾಮದ ಹಾಗೂ ಕೊಡ್ಲಿಪೇಟೆಯ ಕ್ರೈಸ್ತ ಸಮುದಾಯದವರು ಏಸುಕ್ರಿಸ್ತ ಹಾಗೂ ಮರಿಯಮ್ಮನ ತೇರನ್ನು ಹೊತ್ತು ಚರ್ಚ್ ಸುತ್ತ ಮೆರವಣಿಗೆ ಮಾಡಿದರು. ನಂತರ ಹಬ್ಬದ ಗಾಯನ, ಬಲಿಪೂಜೆ, ಪ್ರಬೋಧನೆ, ಪರಮಪ್ರಸಾದ ಆರಾಧನೆ ನಡೆದವು. ವಿಶೇಷ ಪ್ರಾರ್ಥನೆ ನೆರವೇರಿತು. ಕೊಡ್ಲಿಪೇಟೆಯ ಎಲಿಜಬೆತ್ ರಾಜ್ ನೇತೃತ್ವದಲ್ಲಿ ವಾರ್ಷಿಕ ಹಬ್ಬದ ತೇರು ಮೆರವಣಿಗೆ, ಬಲಿಪೂಜೆ ನಡೆಯಿತು.
ತಾ. 27 ರವರೆಗೂ ಪ್ರತಿದಿನ ಸಂಜೆ 5.30 ರಿಂದ ಬೀಟಿಕಟ್ಟೆ, ಬಸವನಕೊಪ್ಪಲು, ಗೋಪಾಲಪುರ, ಶನಿವಾರಸಂತೆ, ಕಳಲೆ-ಹೊಸೂರು ಗ್ರಾಮಗಳ ಕ್ರೈಸ್ತ ಸಮುದಾಯದವರಿಂದ ತೇರು ಮೆರವಣಿಗೆ ಪೂಜೆ ನಡೆಯಲಿದೆ ಎಂದು ಫಾದರ್ ಡೇವಿಡ್ ಸಗಾಯ್ ರಾಜ್ ತಿಳಿಸಿದರು.