ಸಿದ್ದಾಪುರ, ಮೇ 24: ದೇಶಾದ್ಯಂತ ಬಿ.ಜೆ.ಪಿ.ಗೆ ಸಿಕ್ಕ ಗೆಲವು ಹಾಗೂ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಹೆಚ್ಚು ಮತಗಳಿಂದ ಗೆಲವು ಸಾಧಿಸಿರುವ ಹಿನ್ನೆಲೆ ಸಿದ್ದಾಪುರ ಬಿ.ಜೆ.ಪಿ. ವಿಜಯೋತ್ಸವ ಆಚರಿಸಿತು.

ಸಿದ್ದಾಪುರ ಬಸ್ ನಿಲ್ದಾಣಕ್ಕೆ ಮೆರವಣಿಗೆ ನಡೆಸಿದ ಕಾರ್ಯಕರ್ತರು ಜೈಕಾರ ಕೂಗಿದರು. ಬಳಿಕ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಕಾರ್ಯಕರ್ತರಿಗೆ ಸಿಹಿ ಹಂಚಲಾಯಿತು. ಪಟಾಕಿ ಸಿಡಿಸಿ ಗೆಲವನ್ನು ಸಂಭ್ರಮಿಸಲಾಯಿತು.

ಕಾರ್ಯಕ್ರಮದಲ್ಲಿ ಬಿ.ಜೆ.ಪಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ಸ್ಥಾನೀಯ ಸಮಿತಿ ಅಧ್ಯಕ್ಷ ಕುಕ್ಕುನೂರು ನಾಣಯ್ಯ, ಮುಖಂಡರಾದ ಅನಿಲ್ ಶೆಟ್ಟಿ, ಪ್ರವೀಣ್, ಆನಂದ, ದೇವಪ್ರಕಾಶ್, ಸಣ್ಣು, ರಂಜು, ಸೂದನ ಸತೀಶ್, ಪ್ರಜಿತ್ ಸೇರಿದಂತೆ ಇನ್ನಿತರರು ಇದ್ದರು.