ಗುಡ್ಡೆಹೊಸೂರು, ಮೇ 24: ಬಿ.ಜೆ.ಪಿ. ರಾಜ್ಯದಲ್ಲಿ ಮತ್ತು ದೇಶದಲ್ಲಿ ಜಯಭೇರಿ ಭಾರಿಸಿದ ಹಿನ್ನೆಲೆ ಕಾರ್ಯಕರ್ತರು ಗುಡ್ಡೆಹೊಸೂರು ಪಂಚಾಯಿತಿ ವಾಪ್ತಿಯಲ್ಲಿ ಬೈಕ್ ರ್ಯಾಲಿಯೊಂದಿಗೆ ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು. ತಡರಾತ್ರಿ 10 ಗಂಟೆಯ ತನಕ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. ಪಟಾಕಿ ಸಿಡಿಸುವದರೊಂದಿಗೆ ದೇಶದಲ್ಲಿ ಮತ್ತು ರಾಜ್ಯದಲ್ಲಿ ಕಮಲ ಅರಳಿಸಿದಂತೆ ವಿವಿಧ ಮಾದರಿಯ ಪಟಾಕಿಯೊಂದಿಗೆ ಆಕಾಶದಲ್ಲಿ ಕಮಲವನ್ನು ಅರಳಿಸಲಾಯಿತು. ಮಾದಪಟ್ಟಣದ ಕಾರ್ಯಕರ್ತರು ಅಲ್ಲಿನ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಂಭ್ರಮಾಚರಣೆ ನಡೆಸಿದರು.
ಈ ಸಂದರ್ಭ ಅಧಿಕ ಮಂದಿ ಕಾರ್ಯರ್ತರು, ಪಂಚಾಯಿತಿ ಸದಸ್ಯರಾದ ಪ್ರವೀಣ್, ಬಸವರಾಜ್, ಪುಷ್ಪ ಮುಂತಾದವರು ಹಾಜರಿದ್ದರು. ಗುಡ್ಡೆಹೊಸೂರಿನಲ್ಲಿ ಜಿ.ಎಂ. ಸಲಿಂ, ಜಿ.ಎಂ.