ಮಡಿಕೇರಿ, ಮೇ 24: ನಗರದ ಕನ್ನಿಕಾ ಬಡಾವಣೆ ಬಳಿ ಚಾಲಕನ ಹತೋಟಿ ತಪ್ಪಿದ ಕಾರೊಂದು (ಕೆಎ 50-ಎಂ 2960) ಎದುರಿನ ಮತ್ತೊಂದು ಕಾರಿಗೆ (ಕೆಎ 03-6745) ಡಿಕ್ಕಿಯಾಗಿ ಪಕ್ಕದ ತೋಡಿಗೆ ಮಗುಚಿಕೊಂಡಿರುವ ಘಟನೆ ಈ ಮಧ್ಯಾಹ್ನ ಸಂಭವಿಸಿದೆ.

ಸ್ಥಳೀಯ ನಿವಾಸಿ ಭರತ್ ಎಂಬವರ ಕಾರಿಗೆ ಡಿಕ್ಕಿಯಾದ ಬೆನ್ನಲ್ಲೇ ಕಾಲೂರಿನ ನಿವಾಸಿ ಎನ್. ಗಣಪತಿ ಚಾಲಿಸುತ್ತಿದ್ದ ಕಾರು ಹತೋಟಿ ತಪ್ಪಿ ತೋಡಿಗೆ ಮಗುಚಿಕೊಂಡಿದೆ. ಪರಿಣಾಮ ಓರ್ವನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.