ವೀರಾಜಪೇಟೆ, ಮೇ 24: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರ ಮಟ್ಟದಲ್ಲಿ ಪ್ರಚಂಡ ಗೆಲವು ಹಾಗೂ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಅವರು ಭಾರೀ ಅಂತರದಿಂದ ಗೆಲವು ಸಾಧಿಸಿದ ಪ್ರಯುಕ್ತ ಇಂದು ಇಲ್ಲಿನ ಗಡಿಯಾರ ಕಂಬದ ಬಳಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಚುನಾವಣೆಯಲ್ಲಿ ಭಾರತಿಯ ಜನತಾ ಪಾರ್ಟಿಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಮೋಘ ಸೇವೆ ಈ ಪ್ರಚಂಡ ಗೆಲವಿಗೆ ಕಾರಣವಾಗಿದೆ ಎಂದು ಪಕ್ಷದ ನಾಯಕರು ವಿಜಯೋತ್ಸವದಲ್ಲಿ ಅಭಿಪ್ರಾಯಪಟ್ಟರು.
ವಿಜಯೋತ್ಸವದಲ್ಲಿ ಬಿಜೆಪಿ ಪಕ್ಷದ ಜಿಲ್ಲಾ ಸಮಿತಿ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಮುಕೊಂಡ ಶಶಿ ಸುಬ್ರಮಣಿ, ಅಚ್ಚಪಂಡ ಮಹೇಶ್ ಗಣಪತಿ, ತಾಲೂಕು ಪ್ರಧಾನ ಕಾರ್ಯದರ್ಶಿ ಸುವಿನ್ ಗಣಪತಿ, ನಗರ ಸಮಿತಿಯ ಅನಿಲ್ ಮಂದಣ್ಣ, ಕರ್ನಂಡ ರಘು ಸೋಮಯ್ಯ, ದಿವಾಕರ್ ಶೆಟ್ಟಿ, ಪಕ್ಷದ ಮುಖಂಡರುಗಳದ ಚೋಟು ಕಾವೇರಪ್ಪ, ಮಧು ದೇವಯ್ಯ, ಪೊನ್ನಪ್ಪ ರೈ, ಜೋಕಿಂ ರಾಡ್ರಿಗಸ್, ಕೆ.ವಿ. ಸಂತೋಷ್, ಅಮ್ಮಣಿಚಂಡ ರಾಜ ನಂಜಪ್ಪ, ಬಿ.ಜಿ. ಸಾಯಿನಾಥ್, ಹಾಗೂ ಪಕ್ಷದ ಕಾರ್ಯಕರ್ತರುಗಳು ಭಾಗವಹಿಸಿದ್ದರು.
ಗಡಿಯಾರ ಕಂಬದ ಬಳಿ ನಡೆದ ವಿಜಯೋತ್ಸವದ ನಂತರ ಕಾರ್ಯಕರ್ತರು ಸೇರಿ ಶಾಸಕರ ಭವನದಿಂದ ವಿಜಯೋತ್ಸವದ ಅಂಗವಾಗಿ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.