ಕೂಡಿಗೆ, ಮೇ 23 : ಬೈಕ್‍ನಲ್ಲಿ ತೆರಳುವ ಸಂದರ್ಭ ಬೈಕ್ ನಿಯಂತ್ರಣ ತಪ್ಪಿ ಹುಲಸೆ ಸಮೀಪದ ರಾಜ್ಯ ಹೆದ್ದಾರಿಯ ಪಕ್ಕದ ಜಮೀನಿನ ತಂತಿ ಕಂಬವೊಂದಕ್ಕೆ ಡಿಕ್ಕಿ ಹೊಡೆದು ಪಕ್ಕದಲ್ಲೆ ಇದ್ದ ಮರಕ್ಕೆ ಅಪ್ಪಳಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪಿದ ಘಟನೆ ನಡೆದಿದೆ.

ತೊರೆನೂರು ಗ್ರಾಮದ ನಿವಾಸಿ ಚಂದ್ರ (40) ಸಾವನ್ನಪ್ಪಿದ ದುರ್ದೈವಿ. ಕುಶಾಲನಗರದ ಸಮಾರಂಭವೊಂದಕ್ಕೆ ಆಗಮಿಸಿ ರಾತ್ರಿ ಮನೆಗೆ ತೆರಳುವ ಸಂದರ್ಭ ಈ ಘಟನೆ ನಡೆದಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಡಿಕ್ಕಿಯಾದ ಸ್ಥಳಕ್ಕೆ ಕುಶಾಲನಗರ ಡಿವೈಎಸ್‍ಪಿ ದಿನಕರ್‍ಶೆಟ್ಟಿ, ವೃತ್ತ ನಿರೀಕ್ಷಕ ದಿನೇಶ್‍ಕುಮಾರ್, ಸಂಚಾರಿ ಪೊಲೀಸ್ ಠಾಣಾಧಿಕಾರಿ ಸೋಮೇಗೌಡ ಆಗಮಿಸಿ, ಪರಿಶೀಲಿಸಿ, ಪ್ರಕರಣ ದಾಖಲಿಸಿದ್ದಾರೆ.