ಮಡಿಕೇರಿ, ಮೇ 23: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮತ ಎಣಿಕೆಯ ಪ್ರಗತಿಯ ವರದಿಯನ್ನು ಮಡಿಕೇರಿ ಆಕಾಶವಾಣಿಯು ಬೆಳಿಗ್ಗೆ 10.46 ರಿಂದ ಬಿತ್ತರಿಸುವ ವ್ಯವಸ್ಥೆಯನ್ನು ಮಾಡಿತ್ತು. ಕ್ಷಣ ಕ್ಷಣದ ಪ್ರಗತಿಯನ್ನು ಬಿತ್ತರಿಸಲು ಟಿ.ಕೆ. ಉಣ್ಣಿಕೃಷ್ಣನ್ ಅವರ ಮಾರ್ಗದರ್ಶನದಲ್ಲಿ ಡಾ. ವಿಜಯ್ ಅಂಗಡಿಯವರ ನಿರ್ವಹಣೆಯಲ್ಲಿ, ಸುಬ್ರಾಯ ಸಂಪಾಜೆ, ಕೆ.ಜಿ. ಶಾರದಾ, ಲಲಿತ, ಸೌಮ್ಯ, ವಿನ್ನ, ಸಂತೋಷ್, ಪಂಕಜ್, ಅನುಸೂಯ, ಜಯಂತಿ ಬಾಯಿ, ಸೋಮಶೇಖರ್, ಲೋಕೇಶ್ ಅವರ ಸಹಕಾರದಲ್ಲಿ ಪ್ರಸಾರ ಮಾಡಲಾ ಯಿತು. 19 ಸುತ್ತುಗಳ ತಾಜಾ ವರದಿಯನ್ನು ಸಂಜೆಯವರೆಗೂ ಕೊಡಗು ಜಿಲ್ಲೆಯ ಕೇಳುಗರಿಗೆ ಬಿತ್ತರಿಸಲು ಮಡಿಕೇರಿ ಆಕಾಶವಾಣಿಯು ಗಮನ ಹರಿಸಿತು.