ಕುಶಾಲನಗರ, ಮೇ 23: ಬುಧವಾರ ಸುರಿದ ಗಾಳಿ ಮಳೆಗೆ ಸಮೀಪದ ರಂಗಸಮುದ್ರ ಮತ್ತು ಹೊಸಪಟ್ಟಣ ಗ್ರಾಮ, ವ್ಯಾಪ್ತಿಯ ರಸ್ತೆ ಬದಿಯಲ್ಲಿ ಮರದ ರೆಂಬೆಗಳು ತುಂಡರಿಸಿ ವಿದ್ಯುತ್ ಕಂಬಗಳ ಮೇಲೆ ಉರುಳಿ ಬಿದ್ದ ಘಟನೆ ನಡೆದಿದೆ. ಮರದ ರಂಬೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ಈ ವ್ಯಾಪ್ತಿಯಲ್ಲಿ 10 ಕ್ಕೂ ಅಧಿಕ ವಿದ್ಯುತ್ ಕಂಬಗಳು ತುಂಡರಿಸಿ ರಸ್ತೆಗೆ ಉರುಳಿ ಬಿದ್ದಿವೆ. ಇದರಿಂದ ಮಧ್ಯಾಹ್ನ ವೇಳೆ ಈ ವ್ಯಾಪ್ತಿಯ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಗಾಳಿಗೆ ಆನೆಕಾಡು ಮತ್ತಿತರ ಪ್ರದೇಶ ಗಳಲ್ಲಿ ಕೂಡ ಮರದ ಕೊಂಬೆಗಳು ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ನಡೆಯಿತು.