ಮಡಿಕೇರಿ, ಮೇ 22: ಸುಂಟಿಕೊಪ್ಪದ ಪ್ರಾಥಮಿಕ ಸರ್ಕಾರಿ ಶಾಲಾ ಮೈದಾನದಲ್ಲಿ ತಾ. 24 ರಿಂದ (ನಾಳೆ) ಜೂನ್ 2 ರವರೆಗೆ ಬ್ಲೂಬಾಯ್ಸ್ ಯುವಕ ಸಂಘದ ವತಿಯಿಂದ ಡಿ.ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್ನ 24ನೇ ವರ್ಷದ ಪಂದ್ಯಾವಳಿ ಪ್ರಾರಂಭವಾಗಲಿದೆ.ಈ ಪಂದ್ಯಾವಳಿಯನ್ನು ತಾ. 24 ರಂದು ಮಧ್ಯಾಹ್ನ 3.30 ಗಂಟೆಗೆ ಬೆಟ್ಟಗೇರಿಯ ಕಾಫಿ ಬೆಳೆಗಾರ, ಪಂದ್ಯಾವಳಿಯ ಮುಖ್ಯ ಪ್ರಾಯೋಜಕರಾದ ಡಿ.ವಿನೋದ್ ಶಿವಪ್ಪ ಅವರ ಪುತ್ರ ವಿಶಾಲ್ ಶಿವಪ್ಪ ಉದ್ಘಾಟಿಸಲಿದ್ದಾರೆ. ಹಾಸನ ಗ್ರಾಹಕರ ವೇದಿಕೆಯ ಅಧ್ಯಕ್ಷ ಎ.ಲೋಕೇಶ್ಕುಮಾರ್, ಕುಶಾಲನಗರದ ಪೆÇಲೀಸ್ ಉಪಅಧೀಕ್ಷಕ ದಿನಕರ ಶೆಟ್ಟಿ, ದಾನಿಗಳಾದ ನಾಳೆಯಿಂದ ಸುಂಟಿಕೊಪ್ಪದಲ್ಲಿ ಡಿ.ಶಿವಪ್ಪ ಸ್ಮಾರಕ ಫುಟ್ಬಾಲ್(ಮೊದಲ ಪುಟದಿಂದ) ಡಿ.ವಿನೋದ್ ಶಿವಪ್ಪ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಶುಕ್ರವಾರ ಮಧ್ಯಾಹ್ನ ಆತಿಥೇಯ ಬ್ಲೂಬಾಯ್ಸ್ ಯುವಕ ಸಂಘ ಮತ್ತು ಪನ್ಯ ಫುಟ್ಬಾಲ್ ತಂಡಗಳ ನಡುವೇ ಪ್ರಥಮ ಪಂದ್ಯಾಟ ಜರುಗಲಿದೆ. ಈ ಬಾರಿ ಪಂದ್ಯಾವಳಿಯಲ್ಲಿ ಬೆಂಗಳೂರಿನ 2,ಮಂಡ್ಯದ 2 , ಮೈಸೂರಿನ 4, ಕೇರಳದ ಕ್ಯಾಲಿಕಟ್ , ಕೂತುಪರಂಬ, ಕುಂಬಳ, ಉಪ್ಪಳ, ನಂಜನಗೂಡು, ಹಾಸನ, ಕೆಜಿಎಫ್ ನ ವಾರಿಯರ್ಸ್ ಫುಟ್ಬಾಲ್ ಕ್ಲಬ್, ಕೊಡಗು ಇಲವೆನ್, ಕೊಡಗರಹಳ್ಳಿಯ ನೇತಾಜಿ ಯುವಕ ಸಂಘ, ಗದ್ದೆಹಳ್ಳದ ಓಮಿಟಿ ತಂಡಗಳೂ ಸೇರಿದಂತೆ ಆತಿಥೇಯ ಸುಂಟಿಕೊಪ್ಪದ ಬ್ಲೂಬಾಯ್ಸ್ ಯೂತ್ ಕ್ಲಬ್ ತಂಡವೂ ಸೇರಿದಂತೆ 22 ತಂಡಗಳು ಪಾಲ್ಗೊಳ್ಳುತ್ತಿವೆ.