ಗೋಣಿಕೊಪ್ಪಲು, ಮೇ 23: ಜಿಲ್ಲಾ ಪಂಚಾಯಿತಿ ಸದಸ್ಯ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಿ.ಕೆ. ಬೋಪಣ್ಣ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳತ್ಮಾಡು ಗ್ರಾಮಕ್ಕೆ ಭೇಟಿ ನೀಡಿ ಆಟೋ ಮೇಲೆ ದಾಳಿ ನಡೆಸಿದ ಸ್ಥಳವನ್ನು ಪರಿಶೀಲನೆ ನಡೆಸಿದರು.
ನಂತರ ಆಟೋ ಚಾಲಕ ಸಿ.ಎ. ವಿನುಕುಮಾರ್ ಮನೆಗೆ ಭೇಟಿ ನೀಡಿ ವಿವರ ಪಡೆದರು. ಸ್ಥಳದಿಂದ ಪೊನ್ನಂಪೇಟೆ ಅರಣ್ಯ ಅಧಿಕಾರಿ ಗಂಗಾಧರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಆಟೋ ಚಾಲಕನಿಗೆ ಸೂಕ್ತ ಪರಿಹಾರ ಕೈಗೊಳ್ಳಬೇಕು ಹಾಗೂ ಸ್ಥಳದಲ್ಲಿ ಬೀಡು ಬಿಟ್ಟಿರುವ ಕಾಡಾನೆಯನ್ನು ಓಡಿಸುವ ಪ್ರಯತ್ನ ನಡೆಸಬೇಕೆಂದು ಸಲಹೆ ನೀಡಿದರು.
ಆರ್‍ಎಫ್‍ಓ ಗಂಗಾಧರ್ ಕಾಡಾನೆ ಓಡಿಸುವ ಕಾರ್ಯಕ್ಕೆ ಕೂಡಲೇ ಕ್ರಮಕೈಗೊಳ್ಳುವ ಭರವಸೆ ನೀಡಿದರಲ್ಲದೆ ಪರಿಹಾರ ಧನ ವಿತರಿಸಲು ಕ್ರಮಕೈಗೊಂಡಿರುವ ಬಗ್ಗೆ ಮಾಹಿತಿ ನೀಡಿದರು.