ಮೈಸೂರು, ಮೇ 23: ಕೊಡಗು - ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್- ಜೆ.ಡಿ.ಎಸ್. ಮೈತ್ರಿ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಅವರನ್ನು ಮಣಿಸುವ ಮೂಲಕ ಎರಡನೇ ಬಾರಿಗೆ ದಿಗ್ವಿಜಯ ಸಾಧಿಸಿದ್ದಾರೆ.ಮತ ಎಣಿಕೆ ಪ್ರಾರಂಭಗೊಂಡ ಮೊದಲ ಸುತ್ತಿನಲ್ಲಿ ಬಿ.ಜೆ.ಪಿ. ಅಭ್ಯರ್ಥಿ ಪ್ರತಾಪ್ ಸಿಂಹ ಅವರು 35748 ಮತಗಳಿಂದ ಮುನ್ನೆಡೆ ಸಾಧಿಸಿದರೆ, ಪ್ರತಿಸ್ಪರ್ಧಿ ಸಿ.ಎಚ್.ವಿಜಯಶಂಕರ್ ಅವರು 34053 ಮತಗಳನ್ನು ಪಡೆದರು.
ದ್ವಿತೀಯ ಸುತ್ತಿನಲ್ಲಿ ಸಿಂಹ ಅವರು 36454 ಮತಗಳಿಸಿದರೆ, ವಿಜಯಶಂಕರ್ 30544 ಮತಗಳಿಗೆ ಸೀಮಿತಗೊಂಡರು. ತೃತೀಯ ಸುತ್ತಿನಲ್ಲಿ ಬಿ.ಜೆ.ಪಿ.ಗೆ 39985 ಹಾಗೂ ಮೈತ್ರಿಗೆ 26188 ಮತಗಳು ಬಿದ್ದವು.4ನೇ ಸುತ್ತಿನಲ್ಲಿಯೂ ಅಂತರ ಕಾಯ್ದುಕೊಂಡ ಬಿ.ಜೆ.ಪಿ. 40894 ಮತಗಳಿಸಿದರೆ ಮೈತ್ರಿ 31058ಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.ಪ್ರಾರಂಭದಿಂದಲೂ ಅಚ್ಚರಿಯ ಮುನ್ನೆಡೆ ಸಾಧಿಸಿದ ಪ್ರತಾಪ್ ಸಿಂಹ ಅವರು 5ನೇ ಸುತ್ತಿನಲ್ಲಿ 36173 ಮತಗಳನ್ನು ಗಳಿಸಿದರು.
ವಿಜಯಶಂಕರ್ 29021 ಮತ ಪಡೆದರು.6ನೇ ಸುತ್ತಿನಲ್ಲಿ ಬಿ.ಜೆ.ಪಿ. 39302 ಹಾಗೂ ಮೈತ್ರಿ ಪಕ್ಷದ ಅಭ್ಯರ್ಥಿ 28207 ಮತಗಳಿಂದ ಹಿನ್ನೆಡೆಯಲ್ಲಿ ಉಳಿದರು.
ಮುಂದುವರಿದು 7ನೇ ಸುತ್ತಿನಲ್ಲಿ ಪ್ರತಾಪ್ ಸಿಂಹ 37342 ಹಾಗೂ ವಿಜಯಶಂಕರ್ 31192 ಮತಗಳಿಸಿದರು.
ಅಂತೆಯೇ 8ನೇ ಸುತ್ತಿನಲ್ಲಿ 37496 ಮತಗಳನ್ನು ಪ್ರತಾಪ್ ಗಳಿಸಿದರೆ ವಿಜಯಶಂಕರ್ 32759ಕ್ಕೆ ತೃಪ್ತಿಪಡುವದು ಅನಿವಾರ್ಯ ವಾಯಿತು.
9ನೇ ಸುತ್ತಿನಲ್ಲಿ ಗೆಲುವಿನ ದಾಖಲೆ ಮುಂದುವರಿಸಿದ ಪ್ರತಾಪ್ ಸಿಂಹ 38595 ವೋಟು ಗಳಿಸಿದರೆ ವಿಜಯಶಂಕರ್ ಅವರು ಇನ್ನಷ್ಟು ಹಿನ್ನೆಡೆಯೊಂದಿಗೆ 28391 ಮತ ಪಡೆದರು.
10ನೇ ಸುತ್ತಿನಲ್ಲಿ ಪ್ರತಾಪ್ ಸಿಂಹ 38659 ಹಾಗೂ ಪ್ರತಿಸ್ಪರ್ಧಿ 27821 ಮತಪಡೆದು ಮುಂದುವರಿದರು.
ಹೀಗೆ ಎಣಿಕೆ ಪ್ರಕ್ರಿಯೆಯಲ್ಲಿ 11ನೇ ಸುತ್ತಿಗೆ ಬಿ.ಜೆ.ಪಿ. 40428 ಹಾಗೂ ಮೈತ್ರಿ 32746 ಮತಗಳಿಗೆ ಮುನ್ನುಡಿ ಬರೆದರು.
ಅನಂತರದಲ್ಲಿ 12ನೇ ಸುತ್ತಿಗೆ ಪ್ರತಾಪ್ 39479 ಮತಗಳಿಸಿ ಮುನ್ನುಗ್ಗುತ್ತಿದ್ದರೆ ವಿಜಯಶಂಕರ್ 28632 ಮತಗಳಿಗೆ ಸೀಮಿತಗೊಳ್ಳಬೇಕಾಯಿತು.
13ನೇ ಸುತ್ತಿಗೆ ಬಿ.ಜೆ.ಪಿ. 38846 ಮತ್ತು ಕಾಂಗ್ರೆಸ್ ಮೈತ್ರಿ 30195 ಮತ ಪಡೆಯಿತು.
14ನೇ ಸುತ್ತಿನಲ್ಲಿ ಮೊದಲ ಬಾರಿಗೆ ಮೈತ್ರಿ ಅಭ್ಯರ್ಥಿ ವಿಜಯ ಶಂಕರ್ ಅವರು 38325 ಮತಗಳನ್ನು ಪಡೆದರೆ, ಬಿ.ಜೆ.ಪಿ. ಅಭ್ಯರ್ಥಿಗೆ ಈ ಸುತ್ತಿನಲ್ಲಿ 31832 ಮತಗಳು ಮಾತ್ರ ಪ್ರಾಪ್ತವಾಯಿತು.
ಅ ಬಳಿಕ 15ನೇ ಸುತ್ತಿನಲ್ಲಿ ಬಿ.ಜೆ.ಪಿ. 36835 ಹಾಗೂ ಮೈತ್ರಿ 35209 ಮತ ಪಡೆಯಿತು.
16ನೇ ಸುತ್ತಿನಲ್ಲಿ ಬಿ.ಜೆ.ಪಿ.ಗೆ 36610 ಹಾಗೂ ಕಾಂಗ್ರೆಸ್ ಮೈತ್ರಿಗೆ 27466 ಮತಗಳು ಲಭಿಸಿದವು.
17ನೇ ಸುತ್ತಿನಲ್ಲಿ ಪ್ರತಾಪ್ ಸಿಂಹ ಅವರು 35074, ವಿಜಯಶಂಕರ್ ಅವರು 21123 ಮತಗಳಿಸಿದರು.
(ಮೊದಲ ಪುಟದಿಂದ) 18 ನೇ ಸುತ್ತಿನಲ್ಲಿ ಮತ್ತೆ ಬಿ.ಜೆ.ಪಿ. 27620 ಹಾಗೂ ಕಾಂಗ್ರೆಸ್ ಮೈತ್ರಿ 24766 ಮತಗಳನ್ನು ಪಡೆಯುವಂತಾಯಿತು.
19ನೇ ಸುತ್ತಿನಲ್ಲಿ ಪ್ರತಾಪ್ ಸಿಂಹ 15882 ಹಾಗೂ ವಿಜಯಶಂಕರ್ 10210 ಮತಗಳಿಸಿದರೆ, 20ನೇ ಸುತ್ತಿನಲ್ಲಿ ಬಿ.ಜೆ.ಪಿ.ಗೆ 751 ಹಾಗೂ ಮೈತ್ರಿಗೆ 1005 ಮತಗಳು ಲಭ್ಯವಾಯಿತು. ಹೀಗೆ ಒಟ್ಟು 685105 ಮತಗಳನ್ನು ಸಂಸದ ಪ್ರತಾಪ್ ಸಿಂಹ ಗಳಿಸಿದರೆ, ಪ್ರತಿಸ್ಪರ್ಧಿ ವಿಜಯ ಶಂಕರ್ 548911 ಮತಗಳಿಗೆ ಕಡೆಯದಾಗಿ ತೃಪ್ತಿಗೊಳ್ಳು ವಂತಾಯಿತು.
ಅಂತಿಮವಾಗಿ ಬಿ.ಜೆ.ಪಿ. ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಒಟ್ಟು 688974 ಮತಗಳನ್ನು ಪಡೆದರು. ಈ ಪೈಕಿ ಸಿಂಹ ಅವರಿಗೆ 3869 ಹಾಗೂ ವಿಜಯಶಂಕರ್ ಅವರಿಗೆ 1406 ಅಂಚೆಮತಗಳು ಲಭ್ಯವಾಯಿತು.
ಅಂತಿಮವಾಗಿ ವಿಜಯಶಂಕರ್ ಅವರು 550327 ಮತಗಳನ್ನು ಪಡೆದು ಸೋಲೊಪ್ಪಿಕೊಂಡಿದ್ದಾರೆ.
ಅಂತೆಯೇ ಪ್ರತಾಪ್ ಸಿಂಹ ಅವರು 138647 ಮತಗಳ ಮುನ್ನೆಡೆ ಸಾಧಿಸಿ ದಾಖಲೆ ನಿರ್ಮಿಸಿದ್ದಾರೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮವಾಗಿ ಪ್ರತಾಪ್ ಸಿಂಹ ಅವರಿಗೆ 102161 ಮತಗಳು ಲಭಿಸಿದ್ದು, ವಿಜಯಶಂಕರ್ ಅವರಿಗೆ 58185 ಮತಗಳಷ್ಟೆ ದೊರೆತಿವೆ. ಇತ್ತ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಜೆ.ಪಿ.ಗೆ 96235 ಮತಗಳು ಲಭಿಸಿದ್ದು, ಕಾಂಗ್ರೆಸ್ ಮೈತ್ರಿಗೆ 54738 ಮತಗಳಷ್ಟೆ ದಕ್ಕಿದೆ.
ಕೊಡಗಿನಲ್ಲಿ ಉಭಯ ಕ್ಷೇತ್ರಗಳಿಂದ ಬಿ.ಜೆ.ಪಿ. 85473 ಮತಗಳೊಂದಿಗೆ ಮುನ್ನೆಡೆ ಕಾಯ್ದುಕೊಂಡಿದೆ.
ಮಾತ್ರವಲ್ಲದೆ ಮಡಿಕೇರಿ ಕ್ಷೇತ್ರದಲ್ಲಿ 529 ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ 584 ನೋಟಾ ಮತಗಳು ಚಲಾಯಿಸಲ್ಪಟ್ಟಿವೆ.
ಕ್ಷೇತ್ರದಲ್ಲಿದ್ದ ಒಟ್ಟು 22 ಅಭ್ಯರ್ಥಿಗಳನ್ನು ಒಳಗೊಂಡಂತೆ ನೋಟಾ ಸಹಿತ ಮಡಿಕೇರಿ ಕ್ಷೇತ್ರದಲ್ಲಿ 169772 ಮತಗಳು ಮತ್ತು ವೀರಾಜಪೇಟೆ ಕ್ಷೇತ್ರದಲ್ಲಿ ಒಟ್ಟು 159287 ಮತಗಳು ಚಲಾವಣೆ ಗೊಂಡಿದೆ.
ಇಬ್ಬರು ಏನೆಂದರು...
ಶತಾಯ ಗತಾಯ ಗೆಲ್ಲಲೇಬೇಕೆಂದು ಹಠ ಹಿಡಿದು ಸಿ.ಹೆಚ್. ವಿಜಯ್ ಶಂಕರ್ಗೆ ಟಿಕೆಟ್ ಕೊಡಿಸಿ ಕ್ಯಾಂಪೇನ್ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯರ ಕನಸು ಸೋತಿದೆ. ಈ ಬಾರಿ ಲಕ್ಷಕ್ಕೂ ಅಧಿಕ ಮತದ ಅಂತರದಿಂದ ಕಮಲ ಪಾಳಯದ ಪ್ರತಾಪ್ ಸಿಂಹ ಗೆಲವಿನ ನಗೆ ಬೀರಿದ್ದಾರೆ. ಈ ಇಬ್ಬರೂ ನಾಯಕರು ಗೆಲವಿಗಾಗಿ ಹೆಚ್ಚು ಪರಿಶ್ರಮ ಪಟ್ಟವರೇ. ಈ ಕುರಿತಾಗಿ ನಾಯಕರು ತಮ್ಮ ಅಭಿಪ್ರಾಯ ಗಳನ್ನು ಹಂಚಿಕೊಂಡಿದ್ದಾರೆ. ಈ ಗೆಲವಿಗೆ ತಾಯಿ ಚಾಮುಂಡೇಶ್ವರಿ, ನನ್ನ ಕ್ಷೇತ್ರದ ನಾಲ್ವರು ಶಾಸಕರು, ಕಾರ್ಯಕರ್ತರು ಕಾರಣ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ನೋಡಬೇಕೆಂಬ ಕಾರಣಕ್ಕಾಗಿ ನನ್ನನ್ನು ಗೆಲ್ಲಿಸಿದ್ದಾರೆ. ಮುಂದಿನ ಐದು ವರ್ಷಗಳ ಕಾಲ ದಶಪಥ ರಸ್ತೆ, ಮಡಿಕೇರಿಗೆ ಚತುಷ್ಪಥ ರಸ್ತೆ, ರೈಲ್ವೆ ಇಲಾಖೆ ಮೇಲ್ದರ್ಜೆಗೆ, ಏರ್ ಪೋರ್ಟ್ ಉನ್ನತೀಕರಣ ಸೇರಿದಂತೆ ಪ್ರತಿಯೊಂದನ್ನೂ ಕೂಡ ಸಂಪೂರ್ಣ ಗೊಳಿಸಿ ಜನರ ಋಣವನ್ನು ತೀರಿಸುತ್ತೇನೆ ಎಂದರು. ನಾನು ಕೇಂದ್ರ ಸಚಿವ ಸ್ಥಾನದ ಆಕಾಂಕ್ಷಿಯಿಲ್ಲ. ಮೋದಿಯವ ರೊಂದಿಗೆ ಕಾಣಿಸಿಕೊಳ್ಳುವದೇ ನನ್ನ ದೊಡ್ಡ ಕನಸಾಗಿತ್ತು. ಈಗ ಮತ್ತೊಮ್ಮೆ ಅವರೊಂದಿಗೆ ಗುರುತಿಸಿಕೊಳ್ಳುವ ಭಾಗ್ಯ ಸಿಕ್ಕಿದೆ. ಅದೇ ನನ್ನ ಪುಣ್ಯ ಎಂದು ಸಂತಸ ವ್ಯಕ್ತಪಡಿಸಿದರು. ಪರಾಜಿತ ಅಭ್ಯರ್ಥಿ ಸಿ, ಹೆಚ್ ವಿಜಯ್ ಶಂಕರ್ ಮಾತನಾಡಿ, ನನ್ನ ಸೋಲು ನನಗೆ ಶಾಕ್ ನೀಡಿದೆ. ಇದು ಕೇವಲ ಒಂದು ಪಕ್ಷದ ಸೋಲಲ್ಲ. ನಮ್ಮದು ಮೈತ್ರಿ ಪಕ್ಷ. ಹಾಗಾಗಿ ಇದನ್ನು ಮೈತ್ರಿ ಧರ್ಮದ ಸೋಲೆಂದು ಭಾವಿಸುತ್ತೇನೆ. ಸೋಲನ್ನು ಮೈತ್ರಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳ ಬೇಕಾಗಿದೆ ಎಂದರು.
ವರದಿ: ಚಿ.ನಾ. ಸೋಮೇಶ್, ರಫೀಕ್ ತೂಚಮಕೇರಿ, ಎನ್.ಎನ್. ದಿನೇಶ್,ಚಿತ್ರ : ಲಕ್ಷ್ಮೀಶ್,