ಗೋಣಿಕೊಪ್ಪ ವರದಿ, ಮೇ 23: ಅಮ್ಮತ್ತಿ-ಕಾರ್ಮಾಡು ಗ್ರಾಮದ ಚೌಡೇಶ್ವರಿ ದೇವಿಯ ವಾರ್ಷಿಕ ಹಬ್ಬ ತಾ. 29 ರಿಂದ ಮೂರು ದಿನಗಳ ಕಾಲ ನಡೆಯಲಿದೆ.
ತಾ. 29 ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ, 7 ಗಂಟೆಗೆ ನಾಗಪೂಜೆ, 8 ಕ್ಕೆ ದೇವಿಪೂಜೆ, ಧ್ವಜಾರೋಹಣ, ಕಲಶ ತರುವದು, ಬೆ. 10.30 ಕ್ಕೆ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಅಧ್ಯಕ್ಷ ಬೋದಸ್ವರೂಪ ಅವರಿಂದ ಆಶೀರ್ವಚನ, ಮಧ್ಯಾಹ್ನ 12 ಗಂಟೆಗೆ ಅಲಂಕಾರ ಪೂಜೆ, ದೇವಿಯ ದರ್ಶನ, ಅನ್ನದಾನ, ಸಂಜೆ 7 ಕ್ಕೆ ಆರತಿ, ಮಹಾಪೂಜೆ, ದೇವಿಯ ದರ್ಶನ, ಅನ್ನದಾನ ನಡೆಯಲಿದೆ.
ತಾ. 30 ರಂದು ಬೆಳಿಗ್ಗೆ 8 ಗಂಟೆಗೆ ದುರ್ಗಾಹೋಮ, ಶತ್ರು ಸಂಹಾರ ಪೂಜೆ, ತಡೆ ಒಡೆಯುವದು, ಬೆ. 10.30 ಕ್ಕೆ ಅರಮೇರಿ ಕಳಂಚೇರಿ ಮಠ ಅಧ್ಯಕ್ಷ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರಿಂದ ಆಶೀರ್ವಚನ, ಮ. 12 ಕ್ಕೆ ದೇವಿಗೆ ನೈವೇದ್ಯ, ಅಲಂಕಾರ ಪೂಜೆ, ದೇವಿ ದರ್ಶನ, ಅರಶಿನ ಕುಂಕುಮ ವಿತರಣೆ, ಅನ್ನದಾನ ನಡೆಯಲಿದೆ. ತಾ. 31 ರಂದು ದೇವಿಗೆ ಪ್ರಸಾದ ಅರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.
ಹಬ್ಬ ಆಚರಣೆಗೆ ಬಾಳೆ ಕಡಿಯುವ ಮೂಲಕ ಚಾಲನೆ ನೀಡಲಾಗಿದೆ. ಹಬ್ಬದ ದಿನದಂದು ಇದೇ ಬಾಳೆ ಹಣ್ಣನ್ನು ದೇವಿಗೆ ಅರ್ಪಿಸುವ ಕಾರ್ಯಕ್ರಮಕ್ಕೆ ಪೂರ್ವತಯಾರಿಯಾಗಿ ಆಚರಿಸಲಾಗುತ್ತಿದೆ. ತಾ 29 ರಿಂದ ಹಲವು ವಿಧಿ ವಿಧಾನಗಳು ಆರಂಭಗೊಳ್ಳಲಿವೆ.
-ಸುದ್ದಿಪುತ್ರ