ಕೂಡಿಗೆ, ಮೇ 23: ಕೂಡಿಗೆ ಸರ್ಕಾರಿ ಪದವಿಪೂರ್ವ ಕಾಲೇಜು ಕಳೆದ ಐದು ವರ್ಷಗಳಿಂದ ಸತತವಾಗಿ ಶೇ. 98 ರಿಂದ ಶೇ. 100 ಫಲಿತಾಂಶ ಪಡೆಯುತಿದೆ. ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕ ವೃಂದದವರನ್ನು ಕಾಲೇಜು ಅಭಿವೃದ್ಧಿ ಸಮಿತಿ ಮತ್ತು ಪೋಷಕ ವರ್ಗದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಮಹಾಲಿಂಗಯ್ಯ, ಕಾಲೇಜಿನ ಹಿರಿಯ ಉಪನ್ಯಾಸಕರಾದÀ ನಾಗಪ್ಪ, ಕೆ.ಸಿ. ಕಾವೇರಮ್ಮ, ಎಂ.ಎಂ. ಸತೀಶ್, ರಮೇಶ್, ಸೂಸಿ ತಂಗಜಾನ್, ಪಲ್ಲವಿ, ಹನುಮರಾಜ್, ಲಿನೇತ್ ಅವರನ್ನು ಗೌರವಿಸಲಾಯಿಸಲಾಯಿತು.
ಈ ಸಂದರ್ಭ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ, ಆರ್‍ಎಂಸಿ ಮಾಜಿ ಅಧ್ಯಕ್ಷ ಎಂ.ಬಿ. ಜಯಂತ್, ಕಾಲೇಜು ಅಭಿವೃದ್ಧಿ ಸಮಿತಿಯ ನಿರ್ದೇಶಕ ಮಹೇಶ್, ಪೋಷಕ ವರ್ಗದವರಾದ ವೆಂಕಟೇಶ್, ರವಿಕುಮಾರ್, ಗಣೇಶ್, ರಾಜಣ್ಣ ಮೊದಲಾದವರು ಇದ್ದರು.