ಗೋಣಿಕೊಪ್ಪ ವರದಿ, ಮೇ 22: ತಾ. 27 ರಿಂದ ಹರಿಯಾಣದ ಹಿಸ್ಸಾರ್ ಮೈದಾನದಲ್ಲಿ ಆರಂಭಗೊಳ್ಳಲಿರುವ ಹಾಕಿ ಇಂಡಿಯಾ ಸಬ್ ಜೂನಿಯರ್ ಬಾಲಕಿಯರ ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ಹಾಕಿಕೂರ್ಗ್ ತಂಡ ಬುಧವಾರ ಪ್ರಯಾಣ ಬೆಳೆಸಿತು. ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಆವರಣದಲ್ಲಿರುವ ಟರ್ಫ್ ಮೈದಾನದಲ್ಲಿ ಕಳೆದ 8 ದಿನಗಳಿಂದ ನಿರಂತರ ಅಭ್ಯಾಸ ನಡೆಸಿದ್ದ 18 ಆಟಗಾರರು ಬುಧವಾರ ಪ್ರಯಾಣ ಆರಂಭಿಸಿದರು.
ಆಟಗಾರರುಗಳಾದ ಡಿ.ಆರ್. ಪ್ರೇಕ್ಷಿಕಾ, ರಕ್ಷಾ ಮುತ್ತಮ್ಮ, ಕೆ.ಎಸ್. ಸುರಕ್ಷಾ, ಎಚ್.ಎಸ್. ಜಾಹ್ಮವಿ, ಎಚ್. ಬಿ. ಸಿದ್ದಗಂಗಾ, ಬಿ.ಜಿ. ಜೀವಿತಾ, ಎಸ್.ಬಿ. ನಿಸರ್ಗ, ಬಿ.ಎಂ. ಕೀರ್ತನಾ, ಎ.ಪಿ. ಸೀಮಾ, ಟಿ.ಎಂ. ಸಿಂಚನ್ ಗಂಗಮ್ಮ, ಎಚ್.ಎ. ತುಷಾರಾ, ಅದಿತಿ ಭಟ್, ಬಿ.ಪಿ. ಶಿವಾಲಿ, ಜಿ. ಕವನ, ಆರ್. ಮೌಲ್ಯ, ಟಿ.ಸಿ. ಸುಚಿತಾ, ಎಸ್. ಎಚ್. ಬೃಂದಾ, ತೇಜಸ್ವಿ ದೇವಯ್ಯ ತಂಡದಲ್ಲಿದ್ದಾರೆ.
ವ್ಯವಸ್ಥಾಪಕರಾಗಿ ಪಿ. ಟಿ. ಸುಪ್ರಿತಾ, ತರಬೇತುದಾರರಾಗಿ ಸಣ್ಣುವಂಡ ಡಿ. ಲೋಕೇಶ್ ತೆರಳಿದ್ದಾರೆ. ಮೇ 28 ರಂದು ಹಾಕಿಕೂರ್ಗ್ ಮೊದಲ ಪಂದ್ಯವನ್ನಾಡಲಿದೆ.
ಅಭ್ಯಾಸದಲ್ಲಿ ಬುಟ್ಟಿಯಂಡ ಚೆಂಗಪ್ಪ, ಸುಬ್ಬಯ್ಯ, ಸಣ್ಣುವಂಡ ಲೋಕೇಶ್ ಹಾಗೂ ಕೊಕ್ಕಂಡ ರೋಶನ್ ತರಬೇತಿ ನೀಡಿದ್ದರು.
-ಸುದ್ದಿಪುತ್ರ