ಸಿದ್ದಾಪುರ, ಮೇ 22: ಅಕ್ರಮವಾಗಿ ಲಾಟರಿ ಟಿಕೆಟ್ಗಳನ್ನು ಮಾರಾಟ ಮಾಡುತ್ತಿದ್ದ ಈರ್ವರನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಸಿದ್ದಾಪುರ ಪಟ್ಟಣದಲ್ಲಿ ನಂಜೇಗೌಡ ಹಾಗೂ ಸಾಧಿಕ್ ಎಂಬಿಬ್ಬರು ಅಕ್ರಮವಾಗಿ ಹೊರ ರಾಜ್ಯದ ಲಾಟರಿ ಟಿಕೆಟ್ಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಸುಳಿವಿನ ಮೇರೆಗೆ ದಾಳಿ ನಡೆಸಿ ಈರ್ವರನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಓರ್ವನಿಂದ ರೂ. 30 ಮುಖ ಬೆಲೆಯ 769 ಟಿಕೆಟ್ ಹಾಗೂ ಇನ್ನೋರ್ವನಿಂದ 201 ಟಿಕೆಟ್ಗಳನ್ನು ಹಾಗೂ ನಗದು ರೂ. 3000 ವಶಪಡಿಸಿ ಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಧೀಶರ ಬಳಿ ಹಾಜರುಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಸಿದ್ದಾಪುರ ಠಾಣಾಧಿಕಾರಿ ಮಹೇಶ್, ಸಿಬ್ಬಂದಿಗಳಾದ ಮಲ್ಲಪ್ಪ, ಮುಗಶೀರ್, ಎಸ್.ಕೆ. ವಸಂತ ಕುಮಾರ್ ಪಾಲ್ಗೊಂಡಿದ್ದರು.