ಕುಶಾಲನಗರ, ಮೇ 22: ಮನೆ ಹಿಂಭಾಗ ಗಾಂಜಾ ಬೆಳೆದಿದ್ದ ಯುವಕನನ್ನು ಕುಶಾಲನಗರ ಪೊಲೀಸರು ಬಂಧಿಸಿ 7 ಕೆಜಿಯಷ್ಟು ಗಾಂಜಾ ವಶಪಡಿಸಿಕೊಂಡಿದ್ದಾರೆ.

ಕುಶಾಲನಗರದ ಬೈಚನಹಳ್ಳಿಯ 1ನೇ ಬ್ಲಾಕ್ ನಿವಾಸಿ ಪೈಟಿಂಗ್ ಕೆಲಸಗಾರ ಮಹಮ್ಮದ್ ಅನೀಸ್ ಬಂಧಿತ ಆರೋಪಿ. ಈತ ತನ್ನ ಮನೆ ಹಿಂಭಾಗದಲ್ಲಿ ಮಾರಾಟ ಮಾಡುವ ಸಲುವಾಗಿ ಗಾಂಜಾ ಗಿಡ ಬೆಳೆದಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಪಿ.ಸುಮನ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ದಿನಕರ ಶೆಟ್ಟಿ, ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ನೇತೃತ್ವದಲ್ಲಿ ಕುಶಾಲನಗರ ಪೊಲೀಸ್ ಠಾಣಾಧಿಕಾರಿ ಜಗದೀಶ್, ಅಪರಾಧ ಪತ್ತೆದಳದ ಸಜಿ, ದಯಾನಂದ, ರವೀಂದ್ರ, ಉಮೇಶ್, ಚಂದ್ರಶೇಖರ್, ಸುಧೀಶ್ ಕುಮಾರ್, ಜೋಸೆಫ್, ಪ್ರಕಾಶ್, ಚಾಲಕರಾದ ಅರುಣ್, ಗಣೇಶ್, ಪ್ರವೀಣ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.