ಮಡಿಕೇರಿ, ಮೇ 21: ಹಲವಾರು ರೀತಿಯ ವೈಶಿಷ್ಟ್ಯತೆಗಳಿಗೆ ಆಗರವಾಗಿರುವ ಕೊಡಗು ಜಿಲ್ಲೆಯಲ್ಲಿನ ಧಾರ್ಮಿಕ ಆಚರಣೆಗಳು - ನಂಬಿಕೆಗಳು ಕೂಡ ವಿಭಿನ್ನ. ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಸಂಪ್ರದಾಯಗಳು ಪುರಾತನ ಕಾಲದಿಂದಲೂ ಆಚರಿಸಲ್ಪಡುತ್ತಿವೆ. ಪ್ರಸ್ತುತದ ಆಧುನಿಕ ಯುಗದಲ್ಲೂ ಇಂತಹ ನಂಬಿಕೆಗಳು- ಆಚರಣೆಗಳಿಗೆ ಯಾವದೇ ಕುಂದು ಬರುತ್ತಿಲ್ಲ. ಯುವ ಸಮೂಹ ಇದರಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಿರುವದು ಮತ್ತೂ ಒಂದು ವಿಶೇಷವಾಗಿದೆ. ಜಿಲ್ಲೆಯಲ್ಲಿ ನಡೆಯುವ ಕೆಲವಾರು ಪರಂಪರಾಗತವಾದ ಆಚರಣೆಗಳು ಬೆಳಕಿಗೆ ಬಂದಿವೆ. ಆದರೂ ಹಲವಷ್ಟು ಕಡೆಗಳಲ್ಲಿ ಹೆಚ್ಚು ಪ್ರಚಾರವಿಲ್ಲದೆ ವಾರ್ಷಿಕವಾಗಿ ನಡೆದುಕೊಂಡು ಬರುತ್ತಿದೆ.
ಇಂತಹ ಒಂದು ಸಾಂಪ್ರದಾಯಿಕವಾದ ಹಬ್ಬ ವೀರಾಜಪೇಟೆ ಸನಿಹದ ಐಮಂಗಲ, ಮಗ್ಗುಲ, ಒಯಿಪಡ ಎಂಬ ಗ್ರಾಮಗಳ ವ್ಯಾಪ್ತಿಯಲ್ಲಿ ತಾ. 15 ರಿಂದ ಜರುಗುತ್ತಿದೆ. ಜನಮಾನಸ ವನ್ನು ಬೆರೆಸುವದರೊಂದಿಗೆ ದೈವಿಕ ಭಾವನೆಗೂ ಒತ್ತು ನೀಡುವ ಕಾರ್ಯಕ್ರಮದ ಕುರಿತಾದ ಮಾಹಿತಿ ಇಲ್ಲಿದೆ. ತಾ. 23ರ ತನಕವೂ ವಾರ್ಷಿಕ ಹಬ್ಬವಾದ ಈ ಬೋಡ್ನಮ್ಮೆ - ತೆರೆ ಮತ್ತಿತರ ಕೈಂಕರ್ಯಗಳು ಮುಂದುವರಿ ಯಲಿವೆ.
ಐಮಂಗಲ, ಮಗ್ಗುಲ ಹಾಗೂ ಒಯಿಪಡ ಗ್ರಾಮಗಳಲ್ಲಿ ಪ್ರತ್ಯೇಕವಾದ ಭದ್ರಕಾಳಿ ದೇವ ನೆಲೆಗಳಿವೆ. ಈ ಮೂರು ದೇವಿಯರು ಅಕ್ಕ ತಂಗಿಯರೆಂದು ಪ್ರತೀತಿಯಿದ್ದು, ತಾ. 19 ರಂದು ಮೂರು ಊರಿನಲ್ಲಿಯೂ ಪಟ್ಟಣಿ ಜರುಗುತ್ತದೆ. ಆಯಾ ದೇವಸ್ಥಾನಗಳಲ್ಲಿ ಅಲ್ಲಲ್ಲಿನ ಜನರು ಸೇರಿ ಕಟ್ಟೋಳೆ ನಿರ್ಮಿಸುತ್ತಾರೆ. ಬಳಿಕ ಇದೇ ದಿನ ರಾತ್ರಿ ಐಮಂಗಲ ಮುಖ್ಯರಸ್ತೆಯ ಬದಿಯಲ್ಲಿರುವ ದೇವರಕಾಡು ಸ್ಥಳಕ್ಕೆ ಒಡ್ಡೋಲಗ, ಸಾಂಪ್ರದಾಯಿಕ ಧಿರಿಸಿನೊಂದಿಗೆ ಆಲೂರಿನ ಜನ ತೆರಳಿದರೆ, ಇತರ ಎರಡು ಊರಿನವರು ಅಲ್ಲಿಗೆ ಬಂದು ಸೇರುತ್ತಾರೆ. ಅಲ್ಲಿಂದ ದೇವಕಾಡುವಿಗೆ ತೆರಳಿ ಪ್ರಾರ್ಥಿಸಲಾಗುತ್ತದೆ.
ಈ ಸಂದರ್ಭ ಅಲ್ಲಿ ಮರದಿಂದ ಎಲೆಬೀಳಲಿರುವ ಪ್ರತೀತಿಯಿದ್ದು, ಇದನ್ನು ಅಲಂಕೃತವಾದ ಬಂಡ್ಕಳಿ ಇತ್ಯಾದಿಯೊಂದಿಗೆ ವಿವಿಧ ಬಗೆಯ ವೇಷಭೂಷಣ ಗಳೊಂದಿಗೆ ಆಯಾಯ ಊರಿನ ಪ್ರತಿ ಮನೆಗೆ ‘ದೋಳ್ಪಾಟ್’ ಸಹಿತವಾಗಿ ತೆರಳಲಾಗುತ್ತದೆ. ಈ ಸಂದರ್ಭದಲ್ಲಿ ಮನೆಯವರು ಅವರವರ ಶಕ್ತ್ಯಾನುಸಾರ ಅತಿಥಿ ಸತ್ಕಾರವನ್ನೂ ಮಾಡುತ್ತಾರೆ.
ತಾ. 20 ರಂದು ಸಂಜೆ ಮೂರು ಊರಿನಲ್ಲಿಯೂ ದೇವರ ಕಳಿಮರಿವೊ ಎಂಬ ಕಾರ್ಯ ಮಹಾಪೂಜೆ ಜರುಗುತ್ತದೆ. ತಾ. 21 ರಂದು ಐಮಂಗಲದಲ್ಲಿ ಕುಡ್ರಂಡ, ಮೇಕತಂಡ, ಮಗ್ಗುಲದಲ್ಲಿ ಚೋಕಂಡ, ಕುಪ್ಪಚ್ಚಿರ, ಒಯಿಪಡದಲ್ಲಿ ಪುಲಿಯಂಡ ಹಾಗೂ ವಾಟೇರಿರ ಮನೆಯಿಂದ ಕುದುರೆ ಹೊರಡುವ ಕಾರ್ಯ ನಡೆಯುತ್ತದೆ. ಈ ವೇಳೆ ಅಲ್ಲಲ್ಲಿನ ಜನರು ಆಯಾ ಸ್ಥಳಗಳಿಗೆ ತೆರಳುವದು ವಾಡಿಕೆ. ಸಂಜೆ ಮಗ್ಗುಲದ ಮಾಚೆಟ್ಟಿ ಪರೆ ಎಂಬ ಸ್ಥಳದ ಗದ್ದೆಯಲ್ಲಿ ಎಲ್ಲರೂ ಸೇರಿ ಅಲ್ಲಿ ಕುದುರೆ, ಓಟದ ಸ್ಪರ್ಧೆಯಂತಹ ಕಾರ್ಯ ಜರುಗಿ ಬಳಿಕ ಮತ್ತೆ ಆಯಾಯ ದೇವಸ್ಥಾನಕ್ಕೆ ತೆರಳಿ ಪೂಜೆ ಜರುಗುತ್ತದೆ. ಇದೇ ದಿನ ರಾತ್ರಿ ಮೂರು ಊರಿನ ನಿರ್ಧಿಷ್ಟ ಮನೆಗಳಲ್ಲಿ ತೆರೆಗಳು ನಡೆಯುತ್ತವೆ.
ತಾ. 22 ರಂದು (ಇಂದು) ಚೂಳೆನಮ್ಮೆ, ಎತ್ತ್ ಪೋರಾಟ, ಪರಿಶಿಷ್ಟ ಜಾತಿಯವರು ಸೇರಿ ಆಚರಿಸಲ್ಪಡುವ ಕುರ್ಂದ್ ನಮ್ಮೆ ಮಾಹಿತಿ ನೀಡಿದರು. ಈ ವಾರ್ಷಿಕವಾದ ಆಚರಣೆಯಲ್ಲಿ ಸ್ಥಳೀಯ ಜನತೆಯಲ್ಲದೆ ತವರು ಮನೆ ಹುಡುಗಿಯರು, ನೆಂಟರಿಷ್ಟರು ಸೇರಿ ಸಾವಿರಾರು ಮಂದಿ ಭಾಗಿಗಳಾಗುತ್ತಾರೆ. ಬೋಡ್ ನಮ್ಮೆಗೆಂದೇ ವೇಷಭೂಷಣಕ್ಕಾಗಿ ಸಾಕಷ್ಟು ಖರ್ಚು - ವೆಚ್ಚಗಳನ್ನು ಮಾಡಲಾಗುತ್ತದೆ ಎಂದು ಪ್ರಕಾಶ್ ತಿಳಿಸಿದರು. ಐಮಂಗಲ ಭದ್ರಕಾಳಿ ಸೇವಾ ಸಮಿತಿ ಅಧ್ಯಕ್ಷ ಪ್ರಕಾಶ್ ಜರುತ್ತದೆ. ತಾ. 23 ರಂದು ಮತ್ತೆ ಎಲ್ಲರೂ ಸೇರಿ ದೇವರನ್ನು ಮತ್ತೆ ಬನಕ್ಕೆ ಬಿಡುವ ಕಾರ್ಯ ಕಟ್ಟುಪಾಡಿನಂತೆ ಒಡ್ಡೋಲಗ ಸಹಿತವಾಗಿ ಜರುಗುತ್ತದೆ.
ಈ ಎಲ್ಲಾ ಆಚರಣೆಗಳು ಪುರಾತನ ಕಾಲದಿಂದಲೇ ಮುಂದುವರಿದುಕೊಂಡು ಬರುತ್ತಿರುವದಾಗಿ ಐಮಂಗಲ ಭದ್ರಕಾಳಿ ಸೇವಾ ಸಮಿತಿಯ ಅಧ್ಯಕ್ಷ ಬೊಳ್ಳಚಂಡ ಪ್ರಕಾಶ್ ಅವರು ‘ಶಕ್ತಿ’ಗೆ ಕಾರ್ಯನಿರ್ವಹಿಸುತ್ತಿದ್ದರೆ, ಮಗ್ಗುಲ ಸಮಿತಿ ಅಧ್ಯಕ್ಷರಾಗಿ ಚೋಕಂಡ ರಮೇಶ್, ಒಯಿಪಡ ಸಮಿತಿ ಅಧ್ಯಕ್ಷರಾಗಿ ವಾಟೇರಿರ ಶಂಕರಿ ಪೂವಯ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಊರು ತಕ್ಕರಾಗಿ ಬೊಳ್ಳಚಂಡ, ಕೊಟ್ಟಿಯಂಡ ಹಾಗೂ ಪುಲಿಯಂಡ ಕುಟುಂಬಸ್ಥರು ಉಸ್ತುವಾರಿ ಹೊಂದಿದ್ದಾರೆ.
-ಶಶಿ ಸೋಮಯ್ಯ