ಕೂಡಿಗೆ, ಮೇ 21 : ಮದಲಾಪುರದಿಂದ ಸೀಗೆಹೊಸೂರಿ ನವರೆಗಿನ ಹಾರಂಗಿ ಮುಖ್ಯನಾಲೆಗೆ ಭಾರಿ ಗಾಳಿಯಿಂದ ಮರಗಳು ಬಿದ್ದು ಹಾನಿಯಾಗಿದ್ದು, ದುರಸ್ತಿ ಕಾರ್ಯವನ್ನು ಆರಂಭಿಸಲಾಗಿದೆ.
ಮುಖ್ಯ ನಾಲೆಗುರುಳಿರುವ ಮರಗಳು ನೀರು ಹರಿಸುವ ಸಂದರ್ಭ ಮುಖ್ಯ ಗೇಟಿಗೆ ಮತ್ತು ತೂಬುಗಳಿಗೆ ಸಿಕ್ಕಿ ಅಪಾಯವಾಗುವ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಯ ವತಿಯಿಂದ ಮುಖ್ಯ ನಾಲೆಯಲ್ಲಿ ಬಿದ್ದಿರುವ ಮರಗಳ ತೆರವು ಹಾಗೂ ಗಿಡಗಂಟಿಗಳ ತೆರವು ಮತ್ತು ಇನ್ನಿತರೆ ದುರಸ್ತಿ ಕಾರ್ಯವನ್ನು ನಡೆಸಲಾಗುತ್ತಿದೆ. ಸಾರ್ವಜನಿಕರ ಆಗ್ರಹದ ಮೇರೆಗೆ ನೀರಾವರಿ ಇಲಾಖೆಯ ಸಹಾಯಕ ಕಾರ್ಯ ಪಾಲಕ ಅಭಿಯಂತರ ನಾಗರಾಜ್ ಅವರ ನೇತೃತ್ವದಲ್ಲಿ ಮುಖ್ಯ ನಾಲೆಯ ದುರಸ್ತಿ ಕಾರ್ಯ ನಡೆಯುತ್ತಿದೆ.