ಕೂಡಿಗೆ, ಮೇ 21: ಲ್ಯಾಪ್ ಟಾಪ್ ಕಳೆದುಕೊಂಡ ವ್ಯಕ್ತಿಗೆ ಸಕಾಲದಲ್ಲಿ ನೆರವಾದ ಪೊಲೀಸ್ ಠಾಣಾಧಿಕಾರಿ ಲ್ಯಾಪ್ ಟಾಪ್ ಮರಳಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಟಾಟಾ ಮೋಟಾರ್ಸ್‍ನ ಗೀರಿಶ್ ತಮ್ಮ ಸುಮಾರು 2 ಲಕ್ಷ ಬೆಲೆ ಬಾಳುವ ಲ್ಯಾಪ್ ಟಾಪ್ ಮತ್ತು ಅದರ ಸಲಕರಣೆಗಳನ್ನು ಮಡಿಕೇರಿ ಮತ್ತು ಮೈಸೂರು ನಡುವೆ ಸಂಚರಿಸುವ ನಂಬರ್ ತಿಳಿಯದ ಟ್ಯಾಕ್ಸಿಯಲ್ಲಿ ಮರೆತು ಬಿಟ್ಟಿದ್ದಾರೆ. ನಂತರ ಹುಣಸೂರಿನ ಠಾಣಾಧಿಕಾರಿಗಳಾದ ಮಹೇಶ್ ಅವರಿಗೆ ಫೋನ್ ಮೂಲಕ ತಿಳಿಸಲಾಗಿ ತಕ್ಷಣವೆ ಕಾರ್ಯಪ್ರವೃತ್ತರಾದ ಪೊಲೀಸ್ ಇಲಾಖೆ ಸಿಬ್ಬಂದಿ ಕಳೆದುಹೋದ ಲ್ಯಾಪ್‍ಟಾಪ್ ಮತ್ತು ಸಲಕರಣೆಗಳನ್ನು ಮರಳಿ ಕೊಡಿಸಿದ್ದಾರೆ.