ಕುಶಾಲನಗರ, ಮೇ 21: ಕುಶಾಲನಗರದ ಜಿಎಸ್ ಫ್ರೆಂಡ್ಸ್ ಗ್ರೂಪ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಕುಶಾಲನಗರದ ಸ್ಪಾಟರ್ಸ್ ತಂಡ ಪ್ರಥಮ, ಸಿದ್ದಾಪುರದ ಕ್ರೇಜಿ ಕ್ರಿಕೆಟರ್ಸ್ ದ್ವಿತೀಯ ಬಹುಮಾನ ಪಡೆದುಕೊಂಡಿದೆ.
ಕುಶಾಲನಗರ ಜಿಎಂಪಿ ಶಾಲಾ ಮೈದಾನದಲ್ಲಿ ನಡೆದ ಪಂದ್ಯಾಟದಲ್ಲಿ ನೆರೆಯ ಮೈಸೂರು, ಹಾಸನ ಜಿಲ್ಲೆಗಳು ಸೇರಿದಂತೆ ವಿವಿಧೆಡೆಗಳ 25 ಕ್ಕೂ ಅಧಿಕ ತಂಡಗಳು ಪಾಲ್ಗೊಂಡಿದ್ದವು. ಪಂದ್ಯಾಟದಲ್ಲಿ ಉತ್ತಮ ಆಟ ಪ್ರದರ್ಶಿಸಿದ ಆಟಗಾರರಿಗೆ ವಿವಿಧ ವೈಯಕ್ತಿಕ ಬಹುಮಾನಗಳನ್ನು ನೀಡಲಾಯಿತು. ಆದಂ ಪಂದ್ಯಾಟದ ವೀಕ್ಷಕ ವಿವರಣೆ ನೀಡಿದರು.
ಜಿಎಸ್ ಫ್ರೆಂಡ್ಸ್ ಗ್ರೂಪ್ನ ಪ್ರಮುಖರಾದ ಗುರು ಅಧ್ಯಕ್ಷತೆಯಲ್ಲಿ ನಡೆದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜಿಎಸ್ ಗ್ರೂಪ್ ಮಾಲೀಕರಾದ ಎಚ್.ಬಿ.ಸಾವಿತ್ರ, ಕುಶಾಲನಗರ ಪಪಂ ಸದಸ್ಯ ಶೇಖ್ ಖಲೀಮುಲ್ಲಾ, ಉದ್ಯಮಿ ರಾಜುಗೌಡ, ಧರ್ಮಗುರು ಫಾ.ಟಿಟಸ್, ದಾನಿಗಳಾದ ನೌಶಾದ್, ಭಾಷಾ, ಲೋಕೇಶ್, ಶಶಿ, ಶಿಬು ಮತ್ತಿತರರು ಪಾಲ್ಗೊಂಡಿದ್ದರು.