ಚೆಟ್ಟಳ್ಳಿ, ಮೇ 21: ವೀರಾಜಪೇಟೆ ಸಮೀಪದಲ್ಲಿರುವ ಕರಡ ತಂಬ್ರಾನ್ ಯೂತ್ ಕ್ರಿಕೆಟರ್ಸ್ ವತಿಯಿಂದ 3ನೇ ವರ್ಷದ ತಂಬ್ರಾನ್ ಟ್ರೋಫಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವು ತಾ. 24 ರಿಂದ 26ರವರೆಗೆ ಕರಡ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರಥಮ ಬಹುಮಾನ 15 ಸಾವಿರ ನಗದು, ದ್ವಿತೀಯ ಬಹುಮಾನ 10 ಸಾವಿರ, ಆಕರ್ಷಕ ಟ್ರೋಫಿ ಹಾಗೂ ವೈಯಕ್ತಿಕ ಬಹುಮಾನ ನೀಡಲಾಗುವದು.

ಆಸಕ್ತ ತಂಡಗಳು ತಾ. 23ರ ಒಳಗೆ ತಂಡವನ್ನು ನೋಂದಾಯಿಸಿ ಕೊಳ್ಳಬೇಕಾಗಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 8197065247, 8971446035, ಹಾಗೂ 8861120189 ಸಂಖ್ಯೆಯನ್ನು ಸಂಪರ್ಕಿಸಬಹುದು.