ಗೋಣಿಕೊಪ್ಪ ವರದಿ, ಮೇ 20: ಕಾಫಿ ತೋಟದಲ್ಲಿ ಪತ್ತೆಯಾದ ಬೃಹತ್ ಗಾತ್ರದ ಹೆಬ್ಬಾವನ್ನು ಹಿಡಿದು ಅರಣ್ಯಕ್ಕೆ ಬಿಡಲಾಯಿತು. ಹಾವು ಸುಮಾರು 10 ಅಡಿಗಿಂತಲೂ ಉದ್ದವಿತ್ತು. ಗೋಣಿಕೊಪ್ಪದ ಉರಗ ಪ್ರೇಮಿ ಶಾಜಿ, ತಿತಿಮತಿ ವಲಯ ಅರಣ್ಯ ಆರ್ ಆರ್ ಟಿ ತಂಡದ ನಾಯಕ ಸಂಜು ಸಂತೋಷ್ ಹಿಡಿದು ತಿತಿಮತಿ ಅರಣ್ಯಕ್ಕೆ ಬಿಟ್ಟರು.ಸೋಮವಾರ ಪಾಲಿಬೆಟ್ಟ ಗ್ರಾಮದ ಕೋಟೆಬೆಟ್ಟ ಕಾಫಿ ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಹಾವು ಪತ್ತೆಯಾಗಿದೆ. ಯಾವದೋ ಜೀವಿಯನ್ನು ಬೇಟೆಯಾಡಿ ನುಂಗುತ್ತಿದ್ದ ಹಾವನ್ನು ಕಂಡು ಭಯಗೊಂಡ ಕಾರ್ಮಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. - ಸುದ್ದಿಪುತ್ರ