ಕುಶಾಲನಗರ, ಮೇ 20: ಮಾನಸಿಕ ಅಸ್ವಸ್ಥನಾಗಿದ್ದ ಅಪರಿಚಿತ ವ್ಯಕ್ತಿಯೊಬ್ಬನನ್ನು ಸ್ಥಳೀಯ ಆಟೋ ಚಾಲಕರು ಆರೈಕೆ ಮಾಡಿ ಹೊಸ ಬಟ್ಟೆಗಳನ್ನು ತೊಡಿಸಿ ಮಾನವೀಯತೆ ಮೆರೆದ ಘಟನೆ ಕುಶಾಲನಗರದಲ್ಲಿ ಕಂಡುಬಂದಿದೆ. ಪಟ್ಟಣದಲ್ಲಿ ಕಳೆದ ಕೆಲವು ಸಮಯದಿಂದ ಕೊಳಕು ಹಾಗೂ ಹರಿದ ಬಟ್ಟೆಯನ್ನು ತೊಟ್ಟು ರಸ್ತೆ ಬದಿಯಲ್ಲಿ ಕುಳಿತು ಭಿಕ್ಷಾಟನೆಯಲ್ಲಿ ತೊಡಗಿದ್ದ ವ್ಯಕ್ತಿಯನ್ನು ಸ್ಥಳೀಯ ಆಟೋ ಚಾಲಕರಾದ ಗಫಾರ್, ಬರಕತ್ ಆಲಿ, ಅಭಿ, ಚೆಲುವ, ಕಿರಣ ಮತ್ತಿತರರು ಸೇರಿ ಆತನ ತಲೆಕೂದಲು ಕ್ಷೌರ ಮಾಡಿಸಿ ಆತನನ್ನು ನದಿಗೆ ಒಯ್ದು ಸ್ನಾನ ಮಾಡಿಸಿ ಉಪಚಾರ ಮಾಡಿದ್ದಾರೆ. ಇದೀಗ ಈ ಅಪರಿಚಿತ ವ್ಯಕ್ತಿ ಸ್ವಲ್ಪ ಶಾಂತಚಿತ್ತನಾಗಿದ್ದು ತನ್ನ ಕಾಯಕ ಮುಂದುವರೆಸಿದ್ದಾನೆ. ಅಪರಿಚಿತ ಯಾರೊಂದಿಗೂ ಮಾತು ಆಡದೆ ಇರುವದರಿಂದ ಈತನ ಹಿನ್ನೆಲೆ ಪತ್ತೆಹಚ್ಚುವಲ್ಲಿ ಮಾತ್ರ ಸಾಧ್ಯವಾಗಿಲ್ಲ.