ಚೆಟ್ಟಳ್ಳಿ, ಮೇ 19: ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಭದ್ರಕಾಳಿ ದೇವರ ವಾರ್ಷಿಕ ಹಬ್ಬ ಬೋಡ್ ನಮ್ಮೆ ಶ್ರದ್ದಾಭಕ್ತಿಯಿಂದ ನೆರವೇರಿತು.
ತಾ. 18ರಂದು ಪೊಲವಂಡಕೋಟದಲ್ಲಿ ಪೊಲವಂದೆÉರೆ ಹಾಗೂ ಗುಂಡಿಯತ್ ಅಯ್ಯಪ್ಪದೇವರ ಪೂಜೆಸಲ್ಲಿಸಲಾಯಿತು. ರಾತ್ರಿ ಚಮ್ಮಟಿರ ಮನೆಯಿಂದ ಕಳಿ ಪ್ರಾರಂಭಿಸಿ ಮೂಕಳೆರ ಹಾಗೂ ಅಚ್ಚಿಯಂಡ ಮನೆಗೆ ಬೋಡುಕಳಿ ತೆರಳಿತು. ತಾ. 19ರಂದು ಮಧ್ಯಾಹ್ನದ ನಂತರ ಚಮ್ಮಟ್ಟಿರ ಮನೆಯಿಂದ ಭದ್ರಕಾಳಿ ದೇವರ ಕುದುರೆ ಹಾಗೂ ಮೂಕಳೆರ ಕುಟುಂಬದ ಐನ್ಮನೆಯಿಂದ ಗುಂಡಿಯ್ಯಪ್ಪ ದೇವರ ಕೃತಕ ಕುದುರೆಯೊಂದಿಗೆ ಭದ್ರಕಾಳಿ ದೇವರ ಬೋಡುಮಾಳ ನೆಲೆಯಲ್ಲಿ ವಿವಿಧ ವೇಷÀಧಾರಿಗಳು ಹಾಗೂ ಊರಿನವರಿಂದ ಪರಸ್ಪರ ಕೆಸೆರೆರಚಾಟ ನಡೆಸಿ ವಾಲಗ ಹಾಗೂ ಮದ್ದಳೆಯ ಶಬ್ಧಕ್ಕೆ ಹೆಜ್ಜೆಹಾಕಿ ಕುಣಿದರು. ಕೃತಕ ಕುದುರೆ ಹಾಗೂ ಕೆಸರಿನೊಂದಿಗೆ ವೇಷದಾರಿಗಳು ಭದ್ರಕಾಳಿ ದೇವಾಯಲಕ್ಕೆ ಬಂದು ಒಪ್ಪಿಸಿ ದೇವರ ಪ್ರಸಾದ ಸ್ವೀಕರಿಸಿದರು.