*ಗೋಣಿಕೊಪ್ಪಲು ಮೇ 19: ಕುಂದ, ಈಚೂರು ಗ್ರಾಮದ ಶ್ರೀ ದಬ್ಬೇಚಮ್ಮ ಜನ ಸಾಮಾನ್ಯರ ಸೇವಾ ಸಂಘದ ವತಿಯಿಂದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಇಲ್ಲಿನ ಕೈಮುಡಿಕೆ ನಾಡ್ ಮಂದ್ನಲ್ಲಿ ಜಿಲ್ಲಾ ಸಹಕಾರ ಬ್ಯಾಂಕಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೊಡಂದೇರ ಬಾಂಡ್ ಗಣಪತಿ ಮತ್ತು ನಿರ್ದೇಶಕರಾಗಿ ಆಯ್ಕೆಯಾದ ಕೋಲತಂಡ ಸುಬ್ರಮಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಶ್ರೀ ದಬ್ಬೇಚಮ್ಮ ಜನಸಾಮಾನ್ಯರ ಸೇವಾ ಸಂಘದ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.