ಗೋಣಿಕೊಪ್ಪ ವರದಿ, ಮೇ 19: ಜಿಲ್ಲಾ ರಕ್ತನಿಧಿ ಕೇಂದ್ರಕ್ಕೆ ತುರ್ತು ರಕ್ತದ ಅವಶ್ಯಕತೆ ಬೇಡಿಕೆಯನ್ನು ಪರಿಗಣಿಸಿ ಇಲ್ಲಿನ ಮಾಂಡವಿ ಮೋಟರ್ಸ್‍ನ ಉದ್ಯೋಗಿಗಳಿಂದ ಸುಮಾರು 12 ಲೀಟರ್ ರಕ್ತ ಸಂಗ್ರಹಿಸಿ ರಕ್ತನಿಧಿ ಕೇಂದ್ರಕ್ಕೆ ನೀಡಲಾಯಿತು.
ಜೆಸಿಐ ಪೊನ್ನಂಪೇಟೆ ಗೋಲ್ಡನ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 34 ಉದ್ಯೋಗಿಗಳು ರಕ್ತದಾನ ಮಾಡಿದರು. ಜೆಸಿಐ ಪೊನ್ನಂಪೇಟೆ ಗೋಲ್ಡನ್ ಅಧ್ಯಕ್ಷೆ ಕೊಣಿಯಂಡ ಕಾವ್ಯ ಮಾತನಾಡಿ, ಜಿಲ್ಲಾ ರಕ್ತನಿಧಿ ಕೇಂದ್ರಕ್ಕೆ ರಕ್ತ ಬೇಡಿಕೆ ಬಂದಿತ್ತು. ಇದನ್ನು ಪರಿಗಣಿಸಿ ರಕ್ತ ಸಂಗ್ರಹ ಮಾಡಲಾಗಿದೆ. ರಕ್ತದಾನಕ್ಕೆ ಸಾರ್ವಜನಿಕರು ಮುಂದಾಗಬೇಕಿದೆ ಎಂದರು. ಈ ಸಂದರ್ಭ ಮಾಂಡವಿ ಮೋಟರ್ಸ್ ಶೋರೂಮ್ ಪ್ರಮುಖರುಗಳಾದ ಚೆಂಗಪ್ಪ, ಮನೋಜ್ ಇದ್ದರು.