ಸೋಮವಾರಪೇಟೆ, ಮೇ 19: ಸಮೀಪದ ಗೆಜ್ಜೆಹಣಕೋಡು ಗ್ರಾಮದಲ್ಲಿ ಬಸವ ಜಯಂತಿಯನ್ನು ಆಚರಿಸಲಾಯಿತು.
ಗ್ರಾಮದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಸಿ.ಎಂ.ಧರ್ಮಪ್ಪ ಉಪನ್ಯಾಸ ನೀಡಿದರು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ವೇದಾಂತಯ್ಯ, ಉಪಾಧ್ಯಕ್ಷ ಜಯರಾಜ್, ತಾಲೂಕು ವೀರಶೈವ ಮಹಾಸಭಾದ ಉಪಾಧ್ಯಕ್ಷೆ ರಶ್ಮಿ ನವೀನ್, ಪ್ರಮುಖರಾದ ತಮ್ಮಯ್ಯ, ಸತೀಶ್, ಶಂಕರಪ್ಪ, ದಯಾಕರ ಮತ್ತಿತರರು ಉಪಸ್ಥಿತರಿದ್ದರು.