ಮಡಿಕೇರಿ, ಮೇ 19: ತಾ. 26ರಿಂದ ಜೂನ್ 1ರವರೆಗೆ ಜಪಾನ್‍ನಲ್ಲಿ ನಡೆಯಲಿರುವ ಜಪಾನ್-ಏಷ್ಯಾ ಯುವ ವಿಜ್ಞಾನ ವಿನಿಮಯ ಕಾರ್ಯಕ್ರಮಕ್ಕೆ ದುದ್ದಿಯಂಡ ಎಂ. ಮೊಹಮ್ಮದ್ ಝಿಯಾನ್ ಆಯ್ಕೆಯಾಗಿದ್ದಾನೆ.

ಈ ಪ್ರತಿಷ್ಟಿತ ಕಾರ್ಯಕ್ರಮಕ್ಕೆ ಆಯ್ಕೆಗೊಂಡ ದೇಶದ ಆಯ್ದ 12 ವಿದ್ಯಾರ್ಥಿಗಳ ಪೈಕಿ ಝಿಯಾನ್ ಒಬ್ಬನಾಗಿದ್ದಾನೆ.

ಮಡಿಕೇರಿಯ ಗಾಳಿಬೀಡಿನಲ್ಲಿರುವ ಕೊಡಗು ಜವಾಹರ್ ನವೋದಯ ವಿದ್ಯಾಲಯದ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಯಾಗಿರುವ ಮೊಹಮ್ಮದ್ ಝಿಯಾನ್, ಕೆ.ಎಂ.ಎ. ಸದಸ್ಯರಾಗಿರುವ ಮತ್ತು ಹಾಲಿ ದೇಶದ ಗಡಿ ಭದ್ರತಾ ಪಡೆಯ ತಿರುವನಂತಪುರಂ ಕೇಂದ್ರದಲ್ಲಿ ಕರ್ತವ್ಯದಲ್ಲಿರುವ, ಮೂಲತಃ ನಲ್ವತ್ತೋಕ್ಲಿನ ದುದ್ದಿಯಂಡ ಮಜೀದ್ ಅವರ ಪುತ್ರ.