ನಾಪೆÇೀಕ್ಲು, ಮೇ 19: ಭಾಷೆ, ಸಂಸ್ಕøತಿ, ಆಚಾರ-ವಿಚಾರದಲ್ಲಿ ಮಕ್ಕಳು ದಾರಿ ತಪ್ಪಿದರೆ ಅದಕ್ಕೆ ಪೋಷಕರೆ ಕಾರಣರಾಗುತ್ತಾರೆ ಎಂದು ಕೊಡವ ಮಕ್ಕಡ ಕೂಟಡ ಅಧ್ಯಕ್ಷ ಬೊಳ್ಳಜ್ಜಿರ ಅಯ್ಯಪ್ಪ ಅಭಿಪ್ರಾಯಪಟ್ಟರು.
ನಾಪೆÇೀಕ್ಲು ಶ್ರೀ ಭಗವತಿ ದೇವಳದ ಸಮುದಾಯ ಭವನದಲ್ಲಿ ಕೊಡವ ಮಕ್ಕಡ ಕೂಟದ ವತಿಯಿಂದ ಆಯೋಜಿಸಲಾಗಿದ್ದ ಆಟ್-ಪಾಟ್-ಪಡಿಪು ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಂದೆ-ತಾಯಿಗಳಿಗೆ ಕೊಡವ ಭಾಷೆ, ಸಂಸ್ಕøತಿಯ ಬಗ್ಗೆ ಮೊದಲು ಅಭಿಮಾನವಿರಬೇಕು. ಆಗ ಮಾತ್ರ ತಮ್ಮ ಮಕ್ಕಳಿಗೆ ಅದನ್ನು ಕಲಿಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಲೇಖಕಿ ಉಳುವಂಗಡ ಕಾವೇರಿ ಉದಯ ಬರೆದ ‘ಹಣ್ಣೆಲೆ ಚಿಗುರೆಲೆ’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ನಾಲ್ಕುನಾಡಿನ ಯುವ ಪ್ರತಿಭೆಗಳಾದ ಹಾಕಿ ಆಟಗಾರ ಕುಂಡ್ಯೋಳಂಡ ಕಾರ್ಯಪ್ಪ, ಥ್ರೋಬಾಲ್ ಆಟಗಾರ್ತಿ ಬೊಪ್ಪಂಡ ರೀಮಾ ಅಪ್ಪಚ್ಚು, ಬಾಸ್ಕೆಟ್ ಬಾಲ್ ಆಟಗಾರ್ತಿ ಕೇಲೇಟಿರ ಹರ್ಷಿತಾ ಬೋಪಯ್ಯ, ಪೆನ್ಸಿಕ್ ಆಟಗಾರ ಕೈಬುಲಿರ ಕುಟ್ಟಪ್ಪ ಅವರನ್ನು ಕೊಡವ ಮಕ್ಕಡ ಕೂಟದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಪ್ಪ ಅವರ ಅನುಪಸ್ಥಿತಿಯಲ್ಲಿ ಅವರ ತಂದೆ ಕಾಶಿ ತಮ್ಮಯ್ಯ ಸನ್ಮಾನ ಸ್ವೀಕರಿಸಿದರೆ, ಹರ್ಷಿತಾ ಪರವಾಗಿ ತಾಯಿ ಮಾಲಾ ಬೋಪಯ್ಯ ಸ್ವೀಕರಿಸಿದರು.
ತರಬೇತುಗಾರರಾದ ಚೀಯಕಪೂವಂಡ ದೇವಯ್ಯ, ಬೊಳ್ಳಂಡ ದೇವಯ್ಯ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಕಂಗಾಂಡ ಜಾಲಿ ಪೂವಪ್ಪ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಂದ ಕೋಲಾಟ್, ಉಮ್ಮತಾಟ್, ಬೊಳಕಾಟ್, ತಾಲಿಪಾಟ್, ಪರೆಯಕಳಿ, ನೃತ್ಯ ಪ್ರದರ್ಶನ ನಡೆಯಿತು.
ವೇದಿಕೆಯಲ್ಲಿ ಭಗವತಿ ದೇವಳದ ಅಧ್ಯಕ್ಷ ಕುಲ್ಲೇಟಿರ ಮಾದಪ್ಪ, ಗೌರವ ಕಾರ್ಯದರ್ಶಿ ಅರೆಯಡ ಸೋಮಪ್ಪ, ಕೊಂಡೀರ ಗಣೇಶ್ ನಾಣಯ್ಯ, ಅರೆಯಡ ಪವಿನ್ ಪೊನ್ನಣ್ಣ, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಕುಲ್ಲೇಟಿರ ಅಜೀತ್ ನಾಣಯ್ಯ, ಬಾಳೆಯಡ ಪ್ರತೀಶ್ ಇದ್ದರು.