ಕುಶಾಲನಗರ, ಮೇ 19: ಉಪ್ಪಾರ ಸಮಾಜದ ಆಶ್ರಯದಲ್ಲಿ ಬೈಚನಹಳ್ಳಿಯ ಶ್ರೀ ಆದಿಶಕ್ತಿ ಅಂತರಗಟ್ಟೆಯಮ್ಮ ದೇವರ ವಾರ್ಷಿಕ ಪೂಜೋತ್ಸವ ಮತ್ತು ಭಗೀರಥ ಜಯಂತಿ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು. ಅರ್ಚಕ ಕೃಷ್ಣಮೂರ್ತಿ ಭಟ್ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಮಹಾಮಂಗಳಾರತಿ ಬಳಿಕ ಅನ್ನಸಂತರ್ಪಣೆ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು. ನಂತರ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ಗೋವಿಂದರಾಜು, ಸ್ಥಳೀಯ ಪ್ರಮುಖರಾದ ರಾಮದಾಸ್, ವಕೀಲ ನೇಮಿರಾಜ್ ಮತ್ತಿತರರು ಭಗೀರಥ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.