ಗೋಣಿಕೊಪ್ಪಲು, ಮೇ 19: ಇಲ್ಲಿನ ಕೈಕೇರಿ ಕಾಲ್ಸ್ ಶಾಲಾ ಆವರಣದಲ್ಲಿ ಮೂರು ದಿನಗಳ ಶ್ರೀ ವಿದ್ಯಾ ಗಣಪತಿ ದಶಮಾನೋತ್ಸವ ಅದ್ಧೂರಿಯಾಗಿ ನೆರವೇರಿತು.
ತಾ. 14 ರಿಂದ ಗಣಪತಿ ಹೋಮದೊಂದಿಗೆ ಆರಂಭಗೊಂಡ ಉತ್ಸವ ತಾ. 16 ರಂದು ನವಚಂಡಿಕಾ ಹೋಮ, ತತ್ವಕಲಾ ಹೋಮ, ಪೂರ್ಣಾಹುತಿ, ಕುಂಭಾಭಿಶೇಕ, ಮಹಾಮಂಗಳಾರತಿಯೊಂದಿಗೆ ನೂರಾರು ಭಕ್ತಾದಿಗಳು ವಿದ್ಯಾ ಗಣಪತಿ, ಆಂಜನೇಯ, ಸುಬ್ರಹ್ಮಣ್ಯ ದೇವರಿಗೆ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.
ಮೈಸೂರಿನ ಅರ್ಚಕರು ಹಾಗೂ ಚಂಡೇವಾದ್ಯ ತಂಡ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಳೆದ 10 ವರ್ಷಗಳ ಹಿಂದೆ ಕಾಲ್ಸ್ ಮುಖ್ಯಸ್ಥ ದತ್ತಾ ಕರುಂಬಯ್ಯ ಹಾಗೂ ಅಶ್ವಿನಿ ನಾಚಪ್ಪ ದೇವಾಲಯವನ್ನು ಭಕ್ತಾದಿಗಳ ಸಹಕಾರದೊಂದಿಗೆ ನಿರ್ಮಾಣ ಮಾಡಿದ್ದು, ತಾ. 16 ರಂದು ಸಾಮೂಹಿಕ ಅನ್ನಸಂತರ್ಪಣೆಯೊಂದಿಗೆ ದೇವರ ಉತ್ಸವ ಮುಕ್ತಾಯಗೊಂಡಿತು.