ಗೋಣಿಕೊಪ್ಪಲು, ಮೇ 19: ಕಳೆದ ಮೂರು ವರ್ಷಗಳಿಂದ ಪೊನ್ನಂಪೇಟೆಯ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಭದ್ರಾವತಿಗೆ ವರ್ಗಾವಣೆಗೊಂಡ ನ್ಯಾಯಾಧೀಶ ಎಂ.ಇ. ಮೋಹನ್ ಗೌಡ ಅವರಿಗೆ ಪೊನ್ನಂಪೇಟೆ ವಕೀಲರ ಸಂಘದ ವತಿಯಿಂದ ಬೀಳ್ಕೊಡಲಾಯಿತು.
ನ್ಯಾಯಾಧೀಶ ಮೋಹನ್ ಗೌಡ ಅವರ ಸೇವೆಯನ್ನು ಹಿರಿಯ ವಕೀಲ ಕೋಟ್ರಮಾಡ ಬೋಪಣ್ಣ, ಮಚ್ಚಮಾಡ ಟಿ. ಕಾರ್ಯಪ್ಪ, ತೀತಿರ ಅಣ್ಣಯ್ಯ, ಮಂಜುನಾಥ್ ಪ್ರಶಂಸಿಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ನ್ಯಾಯಾಧೀಶ ಮೋಹನ್ ಗೌಡ, ನ್ಯಾಯಾಲಯದಲ್ಲಿ ವಕೀಲರೊಂದಿಗಿನ ಆತ್ಮೀಯ ಸಂಬಂಧ ನೆನಪಿಸಿಕೊಂಡರು. ವಕೀಲರ ಸಂಘದ ಅಧ್ಯಕ್ಷ ಸುಳ್ಳಿಮಾಡ ಕಾವೇರಪ್ಪ, ವಕೀಲರಾದ ಅನಿತಾ, ಸುರೇಶ್, ಸಂಜೀವ್ ಮಾತನಾಡಿದರು.
ನ್ಯಾಯಾಧೀಶರ ಕುಟುಂಬ, ಸರಕಾರಿ ಅಭಿಯೋಜಕ ರಾಜೇಂದ್ರ ಪ್ರಸಾದ್ ಮತ್ತು ವಕೀಲರು ಭಾಗವಹಿಸಿದ್ದರು. ವಕೀಲ ಕಳಕಂಡ ಮುತ್ತಪ್ಪ ಕಾರ್ಯಕ್ರಮ ನಿರೂಪಿಸಿದರು.