ಮಡಿಕೇರಿ, ಮೇ 20: ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊಡಗು ಘಟಕದ ವತಿಯಿಂದ ಅಂಬೇಡ್ಕರ್ ಜಯಂತಿ ಅಂಗವಾಗಿ ತಾ. 24 ಮತ್ತು 25ರಂದು ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಜೈಭೀಮ್ ಕಪ್ ಕ್ರಿಕೆಟ್, ಕಬಡ್ಡಿ, ವಾಲಿಬಾಲ್ ಪಂದ್ಯಾಟಗಳು ನಡೆಯಲಿವೆ.
ತಾ. 24ರಂದು ಬೆಳಿಗ್ಗೆ 10.30 ಗಂಟೆಗೆ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ. ಗಣೇಶ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ದ.ಸಂ.ಸ. ಜಿಲ್ಲಾ ಸಂಚಾಲಕ ದಿವಾಕರ್ ಅಧ್ಯಕ್ಷತೆ ವಹಿಸುವರು. ದ.ಸಂ.ಸ. ವಿಭಾಗೀಯ ಸಂಚಾಲಕ ವೀರಭದ್ರಯ್ಯ ಮುಖ್ಯ ಭಾಷಣ ಮಾಡಲಿದ್ದು, ಅತಿಥಿಗಳಾಗಿ ಗ್ರೀನ್‍ಲ್ಯಾಂಡ್ ಹೊಟೇಲ್ ಮಾಲೀಕ ಶರೀನ್, ಗುತ್ತಿಗೆದಾರರಾದ ಹೆಚ್.ಬಿ. ವಿಜಯಕುಮಾರ್, ರಾಜೇಶ್ವರಿ ಶೋ ರೂಂ ಮಾಲೀಕ ಕಿರಣ್ ಕುಮಾರ್, ದ.ಸಂ.ಸ. ಜಿಲ್ಲಾ ಸಂಘಟನಾ ಸಂಚಾಲಕ ಶಿವಕುಮಾರ್, ತಾಲೂಕು ಸಂಚಾಲಕ ದೀಪಕ್ ಪಾಲ್ಗೊಳ್ಳುವರು.
ತಾ. 25ರಂದು ಸಂಜೆ 5.30 ಗಂಟೆಗೆ ನಡೆಯುವ ಸಮಾರೋಪ ಸಮಾರಂಭವನ್ನು ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಹೆಚ್.ಎಸ್. ಬಾಬು ಉದ್ಘಾಟಿಸುವರು. ಅಖಿಲ ಭಾರತ ಅಂಚೆ ನೌಕರರ ಸಂಘದ ವಿಭಾಗೀಯ ಕಾರ್ಯದರ್ಶಿ ಟಿ.ಪಿ. ಶ್ರೀನಿವಾಸ್ ಮುಖ್ಯ ಭಾಷಣ ಮಾಡುವರು. ಅತಿಥಿಗಳಾಗಿ ವ್ಯಾಂಡಮ್ ಮಾಲೀಕ ದಾಮೋದರ್, ಕೃಷಿ ಅಧಿಕಾರಿ ವರದರಾಜು, ಮತ್ತಿತರರು ಭಾಗವಹಿಸುವರು.