ಮಡಿಕೇರಿ, ಮೇ 20: ಆಕಾಶವಾಣಿಯ 103.1 ತರಂಗಾಂತರದಲ್ಲಿ ಪ್ರತಿ ದಿನ ಸಂಜೆ 6.50 ರಿಂದ 7:20ರ ತನಕ ಬಿತ್ತರವಾಗುವ ಉಪಯುಕ್ತ ಕೃಷಿ ಕಾರ್ಯಕ್ರಮಗಳ ವಿವರ.

ತಾ.21 ರಂದು ಕೃಷಿ ಮತ್ತು ಪರಿಸರ ಸಂಬಂಧಿ ರಸಪ್ರಶ್ನೆ ಹಾಗೂ ರೈತರೊಡನೆ ನೇರ ಸಂವಾದ ಕಾರ್ಯಕ್ರಮ-“ಕೃಷಿ ಸಿರಿ“. ಸಂಪರ್ಕಿಸಲು ಸಂಖ್ಯೆಗಳು 08272 221212. ತಾ. 22 ರಂದು ಬಾಳನ್ನು ಬೆಳಗಿಸುವ ಬಾಳೆ ಕುರಿತು ಮಡಿಕೇರಿ ತಾಲೂಕು, ಗಾಳಿಬೀಡು ಅಂಚೆ ಮೊಣ್ಣಂಗೇರಿಯ ವೈ.ಡಿ.ಸೋಮಯ್ಯ ಅವರೊಡನೆ ಸಂದರ್ಶನ, 92 ವರ್ಷ ವಯಸ್ಸಿನ ಹಿರಿಯ ಕೃಷಿಕ ಮಡಿಕೇರಿ ತಾಲೂಕು, ಪಾಲೂರು ಗ್ರಾಮದ ಸೂದನ ಎಂ. ಪೊನ್ನಪ್ಪ ಅವರೊಡನೆ ಸಂವಾದ, ತಾ. 24 ರಂದು ಪ್ರಸ್ತುತ ಪರಿಸ್ಥಿತಿಗಳ ಅವಲೋಕನದ ಕಾರ್ಯಕ್ರಮ ‘ನಾಡು-ನುಡಿ’ ಇದರಲ್ಲಿ ಮಡಿಕೇರಿ ತಾಲೂಕು, ಬೆಟ್ಟಗೇರಿ ಬಕ್ಕ ಗ್ರಾಮದ ರೈತ ಮಹಿಳೆ ನೈಯ್ಯಣಿ ಎ. ಶಾಂತಿ ಅವರೊಡನೆ ಸಂದರ್ಶನ. ತಾ. 25 ರಂದು ಪರಿಸರ, ಕೃಷಿ ಮತ್ತು ಬದುಕು ಕುರಿತ ವಿಚಾರಗಳೊಂದಿಗೆ ಮನೋರಂಜನೆ ನೀಡುವ ಕಾರ್ಯಕ್ರಮ ‘ಕೃಷಿಪುಂಜ’, ತಾ. 26 ರಂದು ಮಡಿಕೇರಿ ತಾಲೂಕು, ಸಂಪಾಜೆ ಹೋಬಳಿ ಅರವತ್ತೊಕ್ಲು ಗ್ರಾಮದ ತಳೂರು ಎಂ. ಪ್ರಕಾಶ್ ಕುಶಾಲಪ್ಪ ಅವರ ರಾಜಮುಡಿ ಭತ್ತದ ಬೇಸಾಯದಲ್ಲಿನ ಅನುಭವ ಕುರಿತು ಸಂದರ್ಶನ.