ಮಡಿಕೇರಿ, ಮೇ 20: ಇಲ್ಲಿನ ಶ್ರೀ ಕೋಟೆ ಮಹಾಗಣಪತಿ ದೇವರಿಗೆ ಚಿನ್ನದ ಕಿರೀಟವನ್ನು ಸಮರ್ಪಿಸಿ ವಾರ್ಷಿಕ ಸಂವತ್ಸರವಾಗಿದ್ದು, ಇದರ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ದೇವಸ್ಥಾನದ ತಾ. 22 ಮುಂಜಾನೆ 6.30ಕ್ಕೆ ದೇವರಿಗೆ ಅಭಿಷೇಕ, ಪಂಚಾಮೃತ ಅಭಿಷೇಕ, ಅಷ್ಠೋತ್ತರ ಕೋಮುನಾರಿಕೇಳ ಅಭಿಷೇಕ, ದ್ವಾದಶಾ ನಾರಿಕೇಳ ಗಣಯಾಗ, 10 ಸಹಸ್ರ ಸಂಖ್ಯೆ ದುರ್ವಾಂಕುರ ಸಮರ್ಪಣೆ, 1 ಸಹಸ್ರ ಸಂಖ್ಯೆ ಎಕ್ಕದ ಹೂವಿನ ಸಮರ್ಪಣೆ, 1 ಸಹಸ್ರ ಮೋದಕ ಸಮರ್ಪಣೆ, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ, ಮಹಾ ನೈವೇದ್ಯ , 12.30ಕ್ಕೆ ಮಂಗಳಾರತಿ ಮತ್ತು ಆಗಮಿಸುವ ಭಕ್ತಾಧಿಗಳಿಗೆ ‘ಅನ್ನ ಸಂತರ್ಪಣಾ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.