ಸೋಮವಾರಪೇಟೆ,ಮೇ 19: ಜಲಂಧರ್‍ನ ಗ್ರೀನ್ ಪ್ಲಾನೆಟ್ ಬಯೋ ಸಂಸ್ಥೆಯ ವತಿಯಿಂದ ನೀಡಲಾಗುವ ಸಾವಯವ ಕೃಷಿ ಪ್ರಶಸ್ತಿಗೆ ಸೋಮವಾರಪೇಟೆಯ ಗೋಣಿಮರೂರು ಗ್ರಾಮದ ಕೃಷಿಕ ಕಿಶೋರ್ ಧರ್ಮಪ್ಪ ಭಾಜನರಾಗಿದ್ದು, ಶಿವಮೊಗ್ಗದಲ್ಲಿ ಇತ್ತೀಚೆಗೆ ಜರುಗಿದ ‘ವಿಷ ರಹಿತ ಕೃಷಿಕರ ಯಶಸ್ಸು-ಜನ್ಮಭೂಮಿ ಉಳಿಸಿ ಅಭಿಯಾನ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ಕಿಶೋರ್ ಅವರು ಗೋಣಿಮರೂರು ಗ್ರಾಮದಲ್ಲಿ ಸಾವಯವ ಕೃಷಿ ಕೈಗೊಂಡಿದ್ದು, ಘನ ಜೀವಾಮೃತ ತಯಾರಿಸುತ್ತಿದ್ದಾರೆ. ಸುಮಾರು 20 ಟ್ರ್ಯಾಕ್ಟರ್‍ನಷ್ಟು ಎರೆಹುಳು ಗೊಬ್ಬರ ತಯಾರಿಸಿದ್ದು, ವಿಷ ರಹಿತ ಕೃಷಿಗೆ ಒತ್ತು ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಗ್ರೀನ್ ಪ್ಲಾನೆಟ್ ಸಂಸ್ಥೆಯ ಮುಖ್ಯಸ್ಥರಾದ ಕಮಲ್‍ಜಿತ್ ಸಿಂಗ್, ಸಂಸ್ಥೆಯ ಸೌತ್ ಇಂಡಿಯಾ ಮುಖ್ಯಸ್ಥೆ ಪರ್ವಿನ್ ಅವರುಗಳು, ಕಿಶೋರ್ ಧರ್ಮಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭ ಪ್ರಮುಖರಾದ ರಾಮಕೃಷ್ಣ, ಯಶ್ವಂತ್, ಶಿವಪ್ಪ, ಕೆಂಪರಾಜು ಅವರುಗಳು ಉಪಸ್ಥಿತರಿದ್ದರು.