ಮಡಿಕೇರಿ, ಮೇ 20 : ಕೂಡಿಗೆ ಸೈನಿಕ ಶಾಲೆಯಲ್ಲಿ ನಡೆಯುತ್ತಿರುವ 19ನೇ ಕರ್ನಾಟಕ ಬೆಟಾಲಿಯನ್ ಎನ್‍ಸಿಸಿ ಶಿಬಿರದ ಶಿಬಿರಾರ್ಥಿಗಳು ಇಂದು ಕೂಡಿಗೆ ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಸಿದರು.
ಸ್ವಚ್ಛ ಭಾರತ, ಬೇಟಿ ಪಡಾವೋ ಬೇಟಿ ಬಚಾವೊ, ರಸ್ತೆ ಸುರಕ್ಷತೆ, ಧೂಮಪಾನದಿಂದಾಗುವ ದುಷ್ಪರಿಣಾಮ ಮತ್ತು ಏಯ್ಡ್ಸ್ ವಿರುದ್ಧ ಶಿಬಿರಾರ್ಥಿಗಳು ಜಾಗೃತಿ ಮೂಡಿಸಿದರು. ಎನ್‍ಸಿಸಿ ಅಧಿಕಾರಿಗಳು ಈ ಸಂದರ್ಭ ಹಾಜರಿದ್ದರು. ಶಿಬಿರ ತಾ. 26 ರವರೆಗೆ ನಡೆಯಲಿದ್ದು, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.