ಸುಂಟಿಕೊಪ್ಪ, ಮೇ 19: 7ನೇ ಹೊಸಕೋಟೆಯ ಮೆಟ್ನಹಳ್ಳ ಬಳಿಯಲ್ಲಿ ಆಕ್ರಮವಾಗಿ ಲಾಟರಿ ಮಾರಾಟ ಮಾಡಲು ತರುತ್ತಿದ್ದ ಸಂದರ್ಭ ಕುಶಾಲನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆಯ ಮೆಟ್ನಹಳ್ಳ ನಿವಾಸಿ ಮೊಹಮದ್ ಎಂಬವರ ಪುತ್ರ ಸನೀಫ್ (34) ಎಂಬಾತ ಶನಿವಾರ ಸಂಜೆ 4.30 ಗಂಟೆಗೆ ಕೇರಳದ ಇರಿಟಿಯಿಂದ ಸ್ವಿಪ್ಟ್ ಕಾರಿನಲ್ಲಿ
ರೂ. 74,000 ಮೌಲ್ಯದ ಕೇರಳ ರಾಜ್ಯದ 2,300 ಲಾಟರಿ ಟಿಕೆಟ್ಗಳನ್ನು ಮಾರಾಟ ಮಾಡಲು ಹೊಸಕೋಟೆಗೆ ತರುತ್ತಿದ್ದ ಸಂದರ್ಭ ದಾಳಿ ನಡೆಸಿ ಮಾಲು ಸಹಿತಿ ಬಂಧಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ., ಸೋಮವಾರಪೇಟೆ ಡಿವೈಎಸ್ಪಿ ದಿನಕರ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತನಿರೀಕ್ಷಕ ದಿನೇಶ್ ಕುಮಾರ್, ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಂ, ಸಿಬ್ಬಂದಿಗಳಾದ ಡಿ.ಎಸ್. ದಯಾನಂದ, ಟಿಎಸ್.ಸಾಜಿ, ಎ.ಎಸ್. ಜೋಸೆಫ್, ವಿ. ಪ್ರಕಾಶ್, ಸುಂಟಿಕೊಪ್ಪ ಪೊಲೀಸ್ ಸಿಬ್ಬಂದಿಗಳಾದ ಪುನಿತ್, ಹರೀಶ್ ಹಾಗೂ ಸಿ.ಡಿ.ಆರ್. ಸೆಲ್ ರಾಜೇಶ್, ಗಿರೀಶ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.