ಮಡಿಕೇರಿ, ಮೇ 18: ಅಂತರ್ರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯ ಪ್ರಯುಕ್ತ ಸರ್ಕಾರಿ ವಸ್ತುಸಂಗ್ರಹಾಲಯ ವತಿಯಿಂದ ಶನಿವಾರ ನಗರದ ಕೋಟೆ ಆವರಣದಲ್ಲಿ ಏರ್ಪಡಿಸಿದ ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಉದ್ಘಾಟಿಸಿದರು.
ಕ್ರಿ.ಶ 1730 ರಿಂದ ಕ್ರಿ.ಶ 1907 ಕಾಲಕ್ಕೆ ಸೇರಿದ ಕೊಡಗು ಜಿಲ್ಲೆಯ ವಿವಿಧ ಐತಿಹಾಸಿಕ ಸ್ಥಳಗಳು ಮತ್ತು ಕಟ್ಟಡಗಳ ಛಾಯಚಿತ್ರಗಳ ಪ್ರದರ್ಶನವು ಎರಡು ದಿನಗಳ ಕಾಲ ನಡೆಯಲಿದ್ದು, ಸಾರ್ವಜನಿಕರು, ಪ್ರವಾಸಿಗರು ವೀಕ್ಷಣೆ ಮಾಡಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಸರ್ಕಾರಿ ವಸ್ತು ಸಂಗ್ರಹಾಲಯದ ಅಧಿಕಾರಿ ಬಿ.ಪಿ.ರೇಖಾ ಮಾತನಾಡಿ ಸುಮಾರು 28 ಸಾಂಸ್ಕøತಿಕ ಹಾಗೂ ಪಾರಂಪರಿಕ ಛಾಯಾಚಿತ್ರಗಳನ್ನು ಇಡಲಾಗಿದ್ದು, ಪ್ರವಾಸಿಗರು, ತಾ.19 ರವರೆಗೆ ಛಾಯಾಚಿತ್ರ ಪ್ರದರ್ಶನ ವೀಕ್ಷಣೆ ಮಾಡಬಹುದಾಗಿದೆ ಎಂದು ತಿಳಿಸಿದರು.