ವೀರಾಜಪೇಟೆ, ಮೆ 18: ಮುಸ್ಲಿಂ ಸಮುದಾಯದ ರಂಜಾನ್ ಶಾಂತಿ ಸೌಹಾರ್ಧಯುತವಾಗಿ ಆಚರಿಸುವಂತಾಗಬೇಕು. ಎಲ್ಲಾ ಧರ್ಮದಲ್ಲಿ ಸ್ನೇಹಚಾರ ಭ್ರಾತೃತ್ವವಿರಬೇಕು ಎಂದು ವೀರಾಜಪೇಟೆ ವೃತ್ತ ನೀರಿಕ್ಷಕ ಕ್ಯಾತೆಗೌಡ ತಿಳಿಸಿದರು.
ವೀರಾಜಪೇಟೆ ಉಪವಿಭಾಗ ಪೊಲೀಸ್ ಇಲಾಖೆಯಿಂದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕ್ಯಾತೆ ಗೌಡ, ಮುಸ್ಲಿಂ ಬಾಂಧವರು ಆಚರಿಸುತ್ತಿರುವ ರಂಜಾನ್ ತಿಂಗಳು ಉಪವಾಸ ಕಾರ್ಯಕ್ರಮ ಶಾಂತಿ ಸೌಹಾರ್ಧಯುತವಾಗಿ ಆಚರಣೆಯಾಗಬೇಕು ಎಂದು ಹೇಳಿದರು. ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಸಹಾಯಕ ಧರ್ಮ ಗುರು ಐಸಾಕ್ ರತ್ನಾಕರ್ ಮಾತನಾಡಿ, ದೇಶದಲ್ಲಿ ಎಲ್ಲಾ ಧರ್ಮಗಳು ಒಂದು ಎಂಬ ಭಾವನೆಗಳು ನಮ್ಮದಾಗಬೇಕು ಎಂದು ಹೇಳಿದರು. ಸಭೆಯಲ್ಲಿ ಎಜಾಜ್‍ಅಹಮ್ಮದ್, ಬಿ.ವಿ. ಹೇಮಂತ್‍ಕುಮಾರ್ ಮಾತನಾಡಿದರು. ಶಾಂತಿ ಸಭೆಯ ವೇದಿಕೆಯಲ್ಲಿ ನಗರ ಪೊಲೀಸ್ ಠಾಣೆಯ ಉಪ ನೀರಿಕ್ಷಕ ಸಂತೋಷ್ ಕಶ್ಯಪ್, ಗ್ರಾಮಾಂತರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಸುರೇಶ್ ಬೋಪಣ್ಣ, ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳು, ಪಟ್ಟಣ ಪಂಚಾಯಿತಿ ಸದಸ್ಯರಾದ ಮೊಹಮ್ಮದ್ ರಾಫಿ, ಜಲೀಲ್, ರಹೀಂ, ಚೇತನ್, ಕೀತಿಯಂಡ ಮಂಜು ಹಾಗೂ ಸಾರ್ವಜನಿಕರು ಹಾಜರಿದ್ದರು.