ಸಿದ್ದಾಪುರ, ಮೇ18: ಮನೆಯ ಮೇಲ್ಛಾವಣಿಯಿಂದ ಕೆಳಗೆ ಬಿದ್ದು ಮಹಿಳೆಯೋರ್ವಳು ದಾರುಣವಾಗಿ ಮೃತಪಟ್ಟ ಘಟನೆ ಸಿದ್ದಾಪುರದಲ್ಲಿ ನಡೆದಿದೆ.

ಸಿದ್ದಾಪುರದ ಎಂ.ಜಿ ರಸ್ತೆಯ ನಿವಾಸಿ ಮಾನು ಎಂಬವರ ಪತ್ನಿ ಸೌಜತ್ (48) ಎಂಬವರು ತನ್ನ ಮನೆಯ ಮೇಲ್ಭಾಗದ ತಾರಸಿನಲ್ಲಿ ಸೌದೆ ತೆಗೆಯಲು ಹೋದಾಗ ಆಕಸ್ಮಿಕವಾಗಿ ಕಾಲುಜಾರಿ ಕೆಳಕ್ಕೆ ಬಿದ್ದ ಪರಿಣಾಮ ತಲೆಯ ಬಾಗಕ್ಕೆ ಗಂಭೀರವಾದ ಗಾಯವಾಗಿತ್ತು. ಕೂಡಲೇ ಸ್ಥಳೀಯರು ಸೌಜತ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಕೂಡ ಅಷ್ಟರಲ್ಲೇ ಅವರು ಮೃತಪಟ್ಟರು. ಮೃತರು ಪತಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.