ಮಡಿಕೇರಿ, ಮೇ 17: ಶಿಕ್ಷಣ, ಸಮಾನತೆ, ಸೌಹಾರ್ದತೆಯಿಂದ ಪ್ರಬುದ್ಧ ಭಾರತ ನಿರ್ಮಾಣ ಮಾಡಲು ಸಾಧ್ಯ ಈ ಬಗ್ಗೆ ಎಲ್ಲರೂ ಒಂದಾದಲ್ಲಿ ಅಂಬೇಡ್ಕರ್ ಅವರ ಸೇವೆಗೆ ನೀಡುವ ಗೌರವ ಎಂದು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ.ಪಿ ಮಹೇಶ್ ಚಂದ್ರಗುರು ಹೇಳಿದರು.ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪರಿಶಿಷ್ಟ ಜಾತಿ, ಪಂಗಡದ ನೌಕರರ ಸಂಘದ ವತಿಯಿಂದ ಡಾ. ಬಿ.ಆರ್ ಅಂಬೇಡ್ಕರ್ ಅವರ 128ನೇ ಜನ್ಮ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಮಾಜದಲ್ಲಿ ತುಳಿತಕ್ಕೆ ಒಳಗಾದವರನ್ನು ಮುಖ್ಯ ವಾಹಿನಿಗೆ ತರಲು ಅಂಬೇಡ್ಕರ್ ಅವರು ಹಗಲಿರುಳು ಹೋರಾಟ ನಡೆಸಿದರ ಫಲವಾಗಿ ಬಡವರಿಗೆ, ದಲಿತರಿಗೆ, ಮಹಿಳೆ ಯರಿಗೆ ಸೌಕರ್ಯ ದೊರೆಯುವಂತಾಗಿದೆ ಎಂದು ಹೇಳಿದರು.ಸಾಧನೆಯ ದೃಷ್ಟಿಯಿಂದ ವಿಶ್ವದಲ್ಲೇ ಅಂಬೇಡ್ಕರ್ ಮೊದಲಿಗ ರಾಗಿದ್ದಾರೆ. ಅವರ ಪ್ರಗತಿಪರ ವ್ಯಕ್ತಿತ್ವವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡರೆ ಆದರ್ಶ ವ್ಯಕ್ತಿಯಾಗಲು ಸಾದ್ಯ ಎಂದರು. ಪರಿಶಿಷ್ಟರ

(ಮೊದಲ ಪುಟದಿಂದ) ಶಕ್ತಿಯನ್ನು ಯಾರೂ ಕಡೆಗಣಿ¸ Àಬಾರದು. ಅಂಬೇಡ್ಕರ್ ಅವರನ್ನು ಪರಿಶಿಷ್ಟರಿಗೆ ಸೀಮಿತ ಮುಖಂಡ ಎಂದು ಗುರುತಿಸಿ ಅಪಮಾನ ಮಾಡಬೇಡಿ, ಅಂಬೇಡ್ಕರ್ ಅವರು ವಿಶ್ವ ಮಾನವ, ಎಲ್ಲರಿಗೂ ಬೇಕಾದ ವ್ಯಕ್ತಿ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಅಂಬೇಡ್ಕರ್ ಕೊಟ್ಟ ಮೀಸಲಾತಿಯಿಂದ ಎಚ್.ಡಿ ದೇವೆಗೌಡ ಪ್ರಧಾನ ಮಂತ್ರಿಯಾದರು, ಸಿದ್ದರಾಮಯ್ಯ ಯಡಿಯೂರಪ್ಪ ಸಿಎಂ ಆಗಲು ಸಂವಿಧಾನ ಬಲವೇ ಕಾರಣ, ಅಂಬೇಡ್ಕರ್ ಎಂದಿಗೂ ಶಕ್ತಿ ರಾಜಕಾರಣ ಮಾಡಲಿಲ್ಲ. ಮುಕ್ತಿ ರಾಜಕಾರಣದಿಂದ ಮಾನವತಾವಾದಿ ಯಾದರು ಎಂದು ನುಡಿದರು.

ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ದೇವದಾಸ್ ಮಾತನಾಡಿ, ಅಂಬೇಡ್ಕರ್ ಪ್ರತಿವಿಷಯದಲ್ಲೂ ಅಪಾರ ಜ್ಞಾನ ಹೊಂದಿದ್ದರು. ಕಾರ್ಮಿಕರ ಕೆಲಸದ ಅವಧಿ ನಿಗದಿ, ಮಹಿಳೆಯರಿಗೆ ಆಸ್ತಿ ಹಕ್ಕು, ಎಲ್ಲರಿಗೂ ಸಮಾನ ಶಿಕ್ಷಣ ಸೇರಿದಂತೆ ಅಂಬೇಡ್ಕರ್ ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.ಅಂಬೇಡ್ಕರ್ ಅವರ ತತ್ವಾದರ್ಶ ಮತ್ತು ವಿಚಾರಗಳನ್ನು ಮರೆತರೆ ದೇಶಕ್ಕೆ ಉಳಿಗಾಲವಿಲ್ಲ' ದೇವದಾಸ್ ಹೇಳಿದರು.

ಮೈಸೂರಿನ ಶಿವಯೋಗಿ ಉರಿಲಿಂಗ ಪೆದ್ದಿಮಠ ಪೀಠಾಧ್ಯಕ್ಷ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಅಂಬೇಡ್ಕರ್ ರಚಿಸಿದ ಸಂವಿಧಾನವು ದೇಶದ ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ. ಸಂವಿಧಾನವು ಪರಿಶಿಷ್ಟರಿಗೆ ಸೀಮಿತವೆಂಬ ಮನಸ್ಥಿತಿಯಿಂದ ಹೊರಬರಬೇಕು ಎಂದು ಹೇಳಿದರು.

ಹಿಂದೆ ಮೇಲು ಜಾತಿ ಕೀಳು ಜಾತಿ ಎಂಬ ಬೇಧ ಎಲ್ಲೆಡೆ ಇದ್ದವು, ಪರಿಶಿಷ್ಟರನ್ನು ಪ್ರಾಣಿಗಳಿಗಿಂತ ಕಡೆಯಾಗಿ ನೋಡುತ್ತಿದ್ದರು, ಇದನ್ನೆಲ್ಲ ಹೋಗಾಲಾಡಿಸಲು ಸಂವಿಧಾನವೇ ಸಾಕ್ಷಿಯಾಗಿ ನಿಂತಿತ್ತು. ಇದಕ್ಕೆ ಪ್ರೇರಣೆಕರ್ತರಾದ ಅಂಬೇಡ್ಕರ್ ಅವರನ್ನು ಎಲ್ಲರೂ ನೆನಪಿಸಿ ಕೊಳ್ಳಬೇಕು ಎಂದು ಹೇಳಿದರು. ಇದೇ ಸಂದರ್ಭ ವಿಭಾಗ ಮಟ್ಟದಲ್ಲಿ ಬೆಳ್ಳಿ ಪದಕ ಪಡೆದ ಬಸ್ ಚಾಲಕರಾದ ಕಾರ್ಯಪ್ಪ, ಕೆ.ಪಿ. ದಿನೇಶ್, ಪಾಪು ಶಿವಯಾನ ಗೊಳ, ಸಂತೋಷ್ ಅನಿನಾಳ, ಸೀನಾ ನಾಯಕ್ ಅವರನ್ನು ಸನ್ಮಾನಿಸಲಾಯಿತು.

ಕರಾರಸಾ ನಿಗಮ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್ ಕುಮಾರ್, ಸಾರಿಗೆ ನಿಗಮ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟರಮಣಪ್ಪ, ಉಪಾಧ್ಯಕ್ಷ ಅಶೋಕ್ ರಾ. ಭಜಂತಿ, ವೇಣು ಗೋಪಾಲ್, ದಿವಾಕರ್, ಎಂ.ಸಿದ್ಧಪ್ಪ ನೇಗಲಾಲ, ಎಂ.ಶಾರದಯ್ಯ, ರಾಮದಾಸ್, ರವಿಪ್ರಕಾಶ್, ಶ್ರೀನಿವಾಸ್, ವಿನಯ್‍ಕುಮಾರ್, ಹುಸೇನ ಸಾಹೇಬ್ ಹಾಜರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗ ದೊಂದಿಗೆ ಶ್ರೀಕಂಠನಾಯಕ ತಂಡದವರು 2 ಗಂಟೆಗಳ ಕಾಲ ನಡೆಸಿದ ಹಾಡುಗಾರಿಕೆ ಪ್ರೇಕ್ಷಕರ ಗಮನ ಸೆಳೆಯಿತು.

ರಥ ಮೆರವಣಿಗೆ

ಬೆಳಿಗ್ಗೆ ನಗರದ ಡಿಪೋ ಬಳಿಯಿಂದ ಪ್ರಾರಂಭವಾದ ಅಂಬೇಡ್ಕರ್ ಭಾವ ಚಿತ್ರದ ರಥ ಮೆರವಣಿಗೆ ನಗರದ ಮುಖ್ಯ ಬೀದಿಗಳಲ್ಲಿ ಸಾಗಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಸಮಾಪ್ತಿಗೊಂಡಿತು. ರಥಕ್ಕೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ ಪನ್ನೇಕರ್, ಸಿಇಒ ಲಕ್ಷ್ಮಿ ಪ್ರಿಯಾ, ಮಡಿಕೇರಿ ಡಿವೈಎಸ್ಪಿ ಸುಂದರರಾಜ್ ಹಾಗೂ ಮಡಿಕೇರಿ ತಾಲೂಕು ಕಾರ್ಯನಿರ್ವಹಣಾಧಿಕಾರಿ ಪಿ. ಲಕ್ಷ್ಮಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.