ಮಡಿಕೇರಿ, ಮೇ 17: ಮೂರ್ನಾಡು ಗಾಂಧಿನಗರದ ಶ್ರೀ ಅನ್ನಪೂಣೇಶ್ವರಿ ದೇವಾಲಯದ 4ನೇ ವಾರ್ಷಿಕೋತ್ಸವದ ಪ್ರಯುಕ್ತ ದೇವಾಲಯ ಹಾಗೂ ಅನ್ನಪೂರ್ಣೇಶ್ವರಿ ಸೇವಾ ಪ್ರತಿಷ್ಠಾನದ ವತಿಯಿಂದ 3ನೇ ಚಂಡಿಕಾಯಾಗ ಮತ್ತು ನೃತ್ಯೋತ್ಸವ ಸಮಾರಂಭ ತಾ. 18 ಹಾಗೂ 19 ರಂದು ನಡೆಯಲಿದೆ.
ತಾ. 18 ರಂದು ಗಣಪತಿ ಪ್ರಾರ್ಥನೆ, 11 ಗಂಟೆಗೆ ಸತ್ಯನಾರಾಯಣ ಪೂಜೆ, ಮಹಾಮಂಗಳಾರತಿ, ಅನ್ನಪ್ರಸಾದ ವಿತರಣೆ ನಡೆಯಲಿದ್ದು, ಸಂಜೆ 4 ಗಂಟೆಗೆ ಋತ್ವಿಜ ವರ್ಣನೆ, ಪುಣ್ಯಾಹ, ಕಲಶ ಸ್ಥಾಪನೆ, ಚಂಡಿಕಾ ಪಾರಾಯಣ, ರಂಗಪೂಜೆ ಅಷ್ಟಾವದನಸೇವೆ ಮತ್ತು ತೀರ್ಥಪ್ರಸಾದ ವಿತರಣೆಯಾಗಲಿದೆ.
ರಾತ್ರಿ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಾಗುವದು. ನಾಟ್ಯಾಂಜಲಿ ನೃತ್ಯ ಹಾಗೂ ಸಂಗೀತ ಶಾಲೆ, ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಇವರಿಂದ ನೃತ್ಯೋತ್ಸವ, ಹೇಮಾವತಿ ಕಾಂತರಾಜ್ ಹಾಗೂ ವಿದ್ಯಾರ್ಥಿಗಳಿಂದ ಭರತನಾಟ್ಯೋತ್ಸವ ನಡೆಯಲಿದೆ. ಸಭಾ ಕಾರ್ಯಕ್ರಮವನ್ನು ಯೋಧ ಹೆಚ್.ಆರ್.ರಾಜೇಶ್ ಉದ್ಘಾಟಿಸಲಿದ್ದು, ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಸಂಸ್ಥಾಪಕರು ಹಾಗೂ ಅರ್ಚಕ ಮಹಾಭಲೇಶ್ವರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಪ್ರವಚನಕಾರರಾಗಿ ಚೈತ್ರಾ ಕುಂದಾಪುರ ಪಾಲ್ಗೊಳ್ಳಲಿದ್ದಾರೆ. ಸನ್ಮಾನಿತರಾಗಿ ಗೋಣಿಕೊಪ್ಪದ ಹಾರ್ಮೋನಿಯಂ ಮತ್ತು ರಂಗಭೂಮಿ ಕಲಾವಿದ ಎಂ.ಆರ್. ಚಂದ್ರಶೇಖರ್ ಹಾಗೂ ಮೂರ್ನಾಡಿನ ತಬಲ ವಾದP ಕೆ.ವಿ. ಚಂದ್ರು ಉಪಸ್ಥಿತರಿರುವರು.
ತಾ. 19 ರಂದು ಬೆಳಿಗ್ಗೆ ಗಣಪತಿ ಹವನ, ನವಗ್ರಹ ಹವನ, ಕಲಾಹವನ, ಚಂಡಿಕಾಯಾಗ, 11 ಗಂಟೆಗೆ ಮಹಾಪೂರ್ಣಾಹುತಿ, ಅಲಂಕಾರ ಪೂಜೆ, ಮಹಾಮಂಗಾಳಾರತಿ, ತೀರ್ಥಪ್ರಸಾದ ವಿತರಣೆಯಾಗಲಿದ್ದು, ಎರಡು ದಿನವು ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಮಹಾಭಲೇಶ್ವರ ಭಟ್ ತಿಳಿಸಿದ್ದಾರೆ.