ಶನಿವಾರಸಂತೆ, ಮೇ 16: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬಿಳಾಹ ಗ್ರಾಮದಲ್ಲಿ ಅಕ್ರಮವಾಗಿಟ್ಟಿದ್ದ 20 ಲೋಡ್ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಡಿವೈಎಸ್ಪಿ ದಿನಕರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರ ನೇತೃತ್ವದಲ್ಲಿ ಬಿಳಾಹ ಗ್ರಾಮದ ಪುಟ್ಟಸ್ವಾಮಿ ಅವರಿಗೆ ಸೇರಿದ ಕಣದಲ್ಲಿ ಗ್ರಾಮದ ದಿನೇಶ ಎಂಬಾತ ಅಕ್ರಮವಾಗಿ ಸುಮಾರು 20 ಲೋಡ್‍ನಷ್ಟು ಮರಳನ್ನು ಮಾರಾಟ ಮಾಡಲು ಕಳ್ಳತನ ಮಾಡಿ ದಾಸ್ತಾನು ಮಾಡಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮರಳನ್ನು ವಶಕ್ಕೆ ಪಡೆದು, ದಾಸ್ತಾನು ಮಾಡಲು ಜಾಗ ನೀಡಿದ ಪುಟ್ಟಸ್ವಾಮಿ ಮತ್ತು ಕಳ್ಳತನ ಮಾಡಿ ಸಾಗಾಟ ಮಾಡಲು ಮರಳನ್ನು ಸಂಗ್ರಹಿಸಿದ್ದ ದಿನೇಶ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಶನಿವಾರಸಂತೆ ಸಹಾಯಕ ಠಾಣಾಧಿಕಾರಿ ಹೆಚ್.ಎಂ. ಗೋವಿಂದ, ಸಿಬ್ಬಂದಿಗಳಾದ ಹರೀಶ್, ಶಫೀರ್, ಬೋಪಣ್ಣ, ಶಿವಲಿಂಗ ಪಾಲ್ಗೊಂಡಿದ್ದರು.